ಅಭಿಪ್ರಾಯ / ಸಲಹೆಗಳು

ಧ್ಯೇಯೋದ್ದೇಶಗಳು

(1) ಜ್ಞಾನಪೀಠ ಪ್ರಶಸ್ತಿ, ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಮತ್ತು ಶ್ರೇಷ್ಠ ಸಾಹಿತಿ/ಲೇಖಕರುಗಳ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಭಾಷೆಗಳಲ್ಲಿ ಅನುವಾದಿಸಿ ಪ್ರಚುರ ಪಡಿಸುವುದು.  ಅಂತೆಯೇ ಇತರ ರಾಷ್ಟ್ರೀಯ ಮಹತ್ವದ ಸಾಹಿತಿ/ಲೇಖಕರ ಕೃತಿಗಳನ್ನು ಕನ್ನಡಕ್ಕೆ ತರುವುದು.

(2) ಬೇರೆ ಭಾಷೆಗಳ ಅತ್ಯುತ್ತಮ ಸಾಹಿತ್ಯಿಕ ಮೌಲ್ಯವುಳ್ಳ ಅಪರೂಪದ ಪ್ರಾಚೀನ ಮತ್ತು ಆಧುನಿಕ ಹಾಗೂ ಸಮಕಾಲೀನ ಸಾಹಿತ್ಯ, ಉತ್ತಮ ಜನಪ್ರಿಯ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸುವುದು.  ಅಂತೆಯೇ ಕನ್ನಡದ ಈ ಬಗೆಯ ಮೌಲಿಕ ಕೃತಿಗಳನ್ನು ಬೇರೆ-ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು.

(3) ವಿಜ್ಞಾನ, ತಂತ್ರ-ವಿಜ್ಞಾನ, ಮಾನವಿಕ ವಿಷಯಗಳು ಹಾಗೂ ಕಲೆಗಳಿಗೆ ಸಂಬಂಧಪಟ್ಟಂತೆ, ಇಂಗ್ಲಿಷ್ ಮತ್ತಿತರ ವಿದೇಶಿ ಭಾಷೆಗಳಲ್ಲಿನ ಮೂಲಭೂತ ಶೈಕ್ಷಣಿಕ ಪುಸ್ತಕಗಳನ್ನು, ವಿವಿಧ ಭಾರತೀಯ ಭಾಷೆಗಳಲ್ಲಿರಬಹುದಾದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸುವುದು.

(4) ರಾಷ್ಟ್ರೀಯ ಮಹತ್ವದ ಸಾಹಿತ್ಯಿಕ-ಸಾಂಸ್ಕೃತಿಕ ವಿಚಾರಗಳನ್ನು ಕುರಿತಂತೆ ಅಖಿಲ ಭಾರತ ಮಟ್ಟದ ವಿಚಾರಗೋಷ್ಠಿ, ಸಂವಾದ, ಕಮ್ಮಟ, ವಿಚಾರಸಂಕಿರಣ, ತರಬೇತಿಗಳನ್ನು ಏರ್ಪಡಿಸುವುದು. ಅಗತ್ಯವೆನಿಸಿದಲ್ಲಿ ಇಂಥ ವಿಚಾರಗೋಷ್ಠಿಗಳ ನಡೆವಳಿಗಳನ್ನು ಪ್ರಕಟಿಸುವುದು.

(5) (ಅ) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಂಗವಾಗಿ ತೌಲನಿಕ ಸಾಹಿತ್ಯ ಅಧ್ಯಯನ ಮತ್ತು ಭಾಷಾಂತರ ಸಂಬಂಧವಾದ ಡಿಪ್ಲೊಮಾ ಶಿಕ್ಷಣದ ಕೋರ್ಸುಗಳನ್ನು ಆರಂಭಿಸುವುದು. ಅದರಲ್ಲಿ (1) ಭಾಷಾಂತರ ಮತ್ತು ಪತ್ರಿಕೋದ್ಯಮ, (2) ಭಾಷಾಂತರ ಮತ್ತು ವಿಜ್ಞಾನ-ತಂತ್ರಜ್ಞಾನ ಸಾಹಿತ್ಯ, (3) ಭಾಷಾಂತರ ಮತ್ತು ಕಾನೂನು ಹಾಗೂ (4) ಭಾಷಾಂತರ ಮತ್ತು ವೈದ್ಯಕೀಯ ಇತ್ಯಾದಿ ಶಿಕ್ಷಣಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮಗಳನ್ನು ರೂಪಿಸಿಅವಕ್ಕೆ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಪಡೆದುಕೊಳ್ಳುವುದು. ಜೊತೆಗೆ ವಿದೇಶೀ ಭಾಷೆಗಳ ಶಿಕ್ಷಣದ ಕೋರ್ಸುಗಳ ವ್ಯವಸ್ಥೆಯನ್ನು ಮಾಡುವುದು.

(ಆ)ಈ ಶಿಕ್ಷಣಗಳನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಾದರಿಯಲ್ಲಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ನಡೆಸಬಹುದು. ಈ ಸಂಬಂಧವಾದ ಉಪನ್ಯಾಸ,ಪ್ರಾಯೋಗಿಕ ಕಾರ್ಯಗಳುಪರೀಕ್ಷಾ ಸಂಬಂಧಿ ಕಾರ್ಯಗಳಿಗೆ ಸೂಕ್ತ ಸಂಭಾವನೆಯನ್ನು ಪ್ರಾಧಿಕಾರದಿಂದಲೇ ನಿಗದಿಗೊಳಿಸಿಕೊಳ್ಳಬಹುದು.

(ಇ)ವೈವಿಧ್ಯಮಯ ಶಿಕ್ಷಣಕ್ರಮಗಳನ್ನು ಒಳಗೊಂಡಂತೆ `ಭಾಷಾ-ಭಾರತಿಯನ್ನು ಒಂದು ಮಿನಿ ವಿಶ್ವವಿದ್ಯಾಲಯವಾಗಿ ರೂಪಿಸುವುದು. ಆ ಮೂಲಕ ಸಂಬಂಧವಾಗಿ ಶಿಕ್ಷಣಗಳನ್ನು ನಡೆಸುವುದಲ್ಲದೆಪರೀಕ್ಷೆಗಳನ್ನು ನಡೆಸುವಪದವಿಗಳನ್ನು ನೀಡುವಪದವಿ ವಿತರಣೆ ಸಮಾರಂಭವನ್ನು ನಡೆಸುವ ಅಧಿಕಾರ ಪ್ರಾಧಿಕಾರಕ್ಕೆ ಇರುವುದು.

(ಈ) ಆಡಳಿತಾತ್ಮಕ ಕಾರ್ಯಗಳಿಗೆ ಪ್ರಾಧಿಕಾರಕ್ಕೆ ಮಂಜೂರು ಮಾಡಲಾಗುವ ಸಿಬ್ಬಂದಿಯ ಮೂಲಕ ಅಥವಾ ಅಗತ್ಯವೆನಿಸಿದಲ್ಲಿ ಪ್ರಾಧಿಕಾರದ ಅನುಮೋದನೆಯ ಮೇರೆಗೆ ಹೊರಗುತ್ತಿಗೆಯ ಸೇವೆಯ ನೇಮಕದೊಂದಿಗೆ ಕಾರ್ಯನಿರ್ವಹಿಸಿಕೊಳ್ಳುವುದು.

(6) ಅನುವಾದಿತ ಪುಸ್ತಕಗಳ ಪ್ರಕಟಣೆಗೆ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಅಂಶಿಕ/ಪೂರ್ಣ ಧನಸಹಾಯ, ಸಾಲ, ಮುಂತಾದ ಆಕ ನೆರವು ನೀಡುವಂಥ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುವುದು.

(7) ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಬಗೆಯ ಅನುವಾದಿತ ಪುಸ್ತಕಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸೂಕ್ತವ್ಯವಸ್ಥೆ ಮಾಡುವುದು.

(8) ಪ್ರಾಧಿಕಾರದಲ್ಲಿ ಭಾಷಾಂತರ ಪ್ರಕಟಣೆಗಳ ಕೇಂದ್ರ ಗ್ರಂಥಾಲಯವೊಂದನ್ನು ಸ್ಥಾಪಿಸುವುದು.

(9) ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ, ರಾಷ್ಟ್ರಮಟ್ಟದ ಸಾಹಿತ್ಯಿಕ, ಸಾಂಸ್ಕೃತಿಕ    ಸಂಸ್ಥೆಗಳಿಂದ ಲಭಿಸಬಹುದಾಗಿರುವ ನೆರವನ್ನು ಪಡೆದುಕೊಳ್ಳಲು ಸೂಕ್ತಕ್ರಮಗಳನ್ನು ಕೈಗೊಳ್ಳುವುದು.

(10) ಅನ್ಯ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿ ಇಲಾಖೆಗಳೊಡನೆ ಸಂಪರ್ಕ ಸಂಬಂಧವನ್ನು ಸ್ಥಾಪಿಸಿಕೊಂಡು, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

(11) ಕನ್ನಡದ ಶ್ರೇಷ್ಠ ಗ್ರಂಥಗಳನ್ನು ಇತರ ಭಾಷೆಗಳಲ್ಲಿ ಪ್ರಕಟಿಸಲು ಆಯಾ ರಾಜ್ಯ    ಸರ್ಕಾರಗಳಿಂದ ಸಹಾಯಧನವನ್ನು ಪಡೆದುಕೊಳ್ಳುವುದು.

(12) ಅನುವಾದ ಕಾರ್ಯಗಳಿಗೆ ಅಗತ್ಯವಾಗಿರುವ ಮೂಲಭೂತ ಶಬ್ದಗಳನ್ನು ಒಳಗೊಂಡಿರುವ ದ್ವಿಭಾಷಾ/ಬಹುಭಾಷಾ ಕೋಶಗಳನ್ನು, ಸಮಾನಾರ್ಥಕ/ ಭಿನ್ನಾರ್ಥಕ ಶಬ್ದಕೋಶಗಳನ್ನು, ಗಾದೆಗಳ ಮತ್ತು ನುಡಿಗಟ್ಟುಗಳ ಕೋಶಗಳನ್ನು ಸಿದ್ಧಪಡಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು.  ಈ ಸಂಬಂಧವಾಗಿ ಕೇಂದ್ರೀಯ ಹಿಂದೀ ನಿರ್ದೇಶನಾಲಯ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಮತ್ತು ಇತರ ಸಂಸ್ಥೆಗಳ ಸಹಾಯ-ಸಹಕಾರಗಳನ್ನು ಪಡೆದುಕೊಳ್ಳುವುದು ಹಾಗೂ ಅವುಗಳಲ್ಲಿ ಪ್ರಚಲಿತವಾಗಿರುವ ನಿಯಮಗಳನ್ನು ಯಥೋಚಿತವಾಗಿ ಅಳವಡಿಸಿಕೊಳ್ಳುವುದು.

(13) ಕನ್ನಡ ಭಾಷೆಗೆ ಭಾರತೀಯ ಸಾಹಿತ್ಯ ಹಾಗೂ ವಿಶ್ವ ಸಾಹಿತ್ಯವನ್ನು ಅನುವಾದಿಸಿ, ಕನ್ನಡ ಪುಸ್ತಕಗಳನ್ನು ಪ್ರಕಟಿಸುವಂತಹ ಮತ್ತು ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಶ್ರಮಮಿಸುತ್ತಿರುವಂಥ ಇತರೆ ಸರ್ಕಾರಿ, ಅರೆ ಸರ್ಕಾರಿ, ಅನುದಾನ ಪಡೆಯುವ ಸ್ವಾಯತ್ತ ಖಾಸಗಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ  ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಕೈಗೊಳ್ಳುವಂಥ ಕಾರ್ಯಚಟುವಟಿಕೆಗಳಲ್ಲಿ ಸಹಕರಿಸುವುದು.

(14) ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಾರ್ಯಾಚರಣೆಗಳ ಹಾಗೂ ಧ್ಯೇಯೋದ್ದೇಶಗಳ ಸಾಧನೆಗಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಇತರ ರಾಜ್ಯ ಸರ್ಕಾರಗಳಿಂದ ಹಾಗೂ ಅನುದಾನ ಪಡೆಯುವ ಸ್ವಾಯತ್ತ, ಅರೆ ಸರ್ಕಾರಿ ಖಾಸಗಿ ಮತ್ತು ವಿದೇಶಗಳಲ್ಲಿರುವ

(15) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಆಯ-ವ್ಯಯದಲ್ಲಿ ಶೇಕಡ 75%ರಷ್ಟನ್ನು ಪ್ರಕಟಣೆ ಯೋಜನೆಗಳಿಗೆ ಬಳಸಬೇಕು. ತನ್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ, ಇತರ ಕಾರ್ಯಗಳನ್ನು ನಿರ್ವಹಿಸಲು ಉಳಿದ ಹಣವನ್ನು ಬಳಸಿಕೊಳ್ಳಬಹುದು.  ಆಯಾ ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಆಕ ವರ್ಷದ ಮೊದಲೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಆ ಪ್ರಕಾರವೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.

(16) ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ರೂ.5.00 ಲಕ್ಷ ಮೊತ್ತದ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸತಕ್ಕದ್ದು. ಭಾರತೀಯ ಭಾಷೆಯ ಯಾವುದೇ ರಾಷ್ಟ್ರ ಖ್ಯಾತಿಯ ಸಾಹಿತಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಈ ಸಂಬಂಧವಾದ ಮಾರ್ಗಸೂಚಿಯನ್ನು ಪ್ರಾಧಿಕಾರ ಪ್ರತ್ಯೇಕವಾಗಿ ರಚಿಸಿಕೊಳ್ಳತಕ್ಕದ್ದು.

(17) ಅನುವಾದ ವಿಭಾಗಕ್ಕೆ ಸಂಬಂಧಿಸಿದಂತೆ, ಅನುವಾದಿತ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಪ್ರತಿವರ್ಷ ಐವರು ಪ್ರತಿಷ್ಠಿತ ಅನುವಾದಕರಿಗೆ ಗೌರವ ಪ್ರಶಸ್ತಿಗಳನ್ನು ಕೊಡುವ. ಹಾಗೂ ಐದು ಗ್ರಂಥಗಳಿಗೆ ವರ್ಷದ ಶ್ರೇಷ್ಠ ಅನುವಾದ ಬಹುಮಾನ ಕೊಡುವುದು. ಗೌರವ ಪ್ರಶಸ್ತಿಯ ಮೊತ್ತ ತಲಾ ರೂ.50,000/-ಗಳು ಹಾಗೂ ಗ್ರಂಥ ಬಹುಮಾನದ ಮೊತ್ತ ರೂ.25,000/-ಗಳಾಗಿರಬೇಕು. ಬಹುಮಾನಕ್ಕೆ ಬರುವ ಅನುವಾದ ಪ್ರಕಾರಗಳಲ್ಲಿ ಕನಿಷ್ಟ ಮೂರು ಶೀರ್ಷಿಕೆಗಳಾದರೂ ಬಂದಿರಬೇಕು.

(18) ಪ್ರಾಧಿಕಾರ ತನ್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ, ಮೇಲೆ ತಿಳಿಸಿದಂಥ ಧ್ಯೇಯೋದ್ದೇಶಗಳಿಗೆ ಹೊಂದುವಂಥ ಇತರ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವುದು.

ಇತ್ತೀಚಿನ ನವೀಕರಣ​ : 17-12-2020 01:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕುವೆಂಪು ಭಾಷಾಭಾರತಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080