ಅಭಿಪ್ರಾಯ / ಸಲಹೆಗಳು

4(1)B

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

          ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ:ಕಸಂವಾಪ್ರ/55/ಕರಅ/2009 ದಿನಾಂಕ:30.05.2009ರ ಪ್ರಕಾರ ಆದೇಶ ಹೊರಡಿಸಿದ ದಿನಾಂಕದಿಂದ ಅನ್ವಯವಾಗುವಂತೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಿದೆ. ಇದರ ಅಂಗವಾಗಿಯೇ ಈ ಮೊದಲು ಸ್ಥಾಪಿತವಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ ವಿಲೀನಗೊಂಡಿದೆ. (ಸರ್ಕಾರದ ಆದೇಶಸಂಖ್ಯೆ ಕಸಂವಾಪ್ರ:55:ಕರಅ:2009 ದಿನಾಂಕ:30.05.2009)

 

 1. () ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಸ್ವರೂಪ ಮೂರು ಮುಖದ್ದಾಗಿರುತ್ತದೆ :

(ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು

(ಆ) ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು

(ಇ) ಪ್ರಕಟಣೆಗಳು

 

()       ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು :

 

(1)       “ಕನ್ನಡ ಸಾಹಿತ್ಯ ಹಿರಿಮೆ-ಗರಿಮೆಗಳಲ್ಲಿ ಯಾವ ಭಾರತೀಯ ಸಾಹಿತ್ಯಕ್ಕೂ ಕಡಿಮೆಯಾಗಿಲ್ಲ.  ಅದರ ಮಹತ್ವವನ್ನು ಎತ್ತಿತೋರಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಅಷ್ಟೇ” ಎಂಬುದಾಗಿ ಕುವೆಂಪು ಅವರು ಉದ್ಘೋಷಿಸಿದ್ದರು.  ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ಅನುವಾದ, ತೌಲನಿಕ ಸಾಹಿತ್ಯ, ವಿದೇಶಿ ಭಾಷೆಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಈ ಕೆಳಕಂಡ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಶಿಕ್ಷಣಗಳನ್ನು ಆರಂಭಿಸಲು ಈಗಾಗಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆಯಲಾಗಿದೆ.

 

 • ಭಾಷಾಂತರ ಡಿಪ್ಲೊಮಾ ಶಿಕ್ಷಣ - ಮೊದಲ ಹಂತದಲ್ಲಿ ಇಂಗ್ಲಿಷ್, ಹಿಂದೀ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ವಿಶೇಷ ತರಬೇತಿಗೆ ಒತ್ತುಕೊಟ್ಟು ಈ ಶಿಕ್ಷಣವನ್ನು ಪ್ರಾರಂಭಿಸಲಾಗುತ್ತದೆ.
 • ಭಾಷಾಂತರದಲ್ಲಿ ಎಂ.ಫಿಲ್ ಶಿಕ್ಷಣ : ವಿಶೇಷ ವಿಷಯಕ್ಕೆ ಒತ್ತುಕೊಟ್ಟು
 • ಪತ್ರಿಕೋದ್ಯಮ ಮತ್ತು ಭಾಷಾಂತರ
 • ಕಾನೂನುಶಾಸ್ತ್ರ, ಆಡಳಿತ ಭಾಷೆ ಮತ್ತು ಭಾಷಾಂತರ
 • ವಿಜ್ಞಾನ ಮತ್ತು ಮಾನವಿಕಶಾಸ್ತ್ರ ಕೃತಿಗಳು ಮತ್ತು ಭಾಷಾಂತರ ; ಮತ್ತು
 • ತೌಲನಿಕ ಸಾಹಿತ್ಯ
 • ವಿದೇಶೀ ಭಾಷೆಗಳ ಶಿಕ್ಷಣ (ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ)

 

(2)       ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಮಟ್ಟದಲ್ಲಿ ಪ್ರಚುರಪಡಿಸಬೇಕಾದರೆ ಜಾಗತಿಕ ಪ್ರಾಚುರ್ಯದ ವಿದೇಶಿ ಭಾಷೆಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಸ್ಪ್ಯಾನಿಷ್, ಜಪಾನಿ, ಫ್ರೆಂಚ್, ರಷ್ಯನ್, ಜರ್ಮನ್, ಚೀಣೀ, ಆಫ್ರಿಕನ್ ಭಾಷೆಗಳು-ಈ ಎಲ್ಲ ಶಿಕ್ಷಣಗಳಿಗೆ ಸಂಬಂಧಿಸಿದಂತೆ, ತಜ್ಞರೊಂದಿಗೆ ಸಮಾಲೋಚಿಸಿ, ಸಮಿತಿಗಳನ್ನು ರಚಿಸಿ ಕೊಂಡು ವಿವಿಧ ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿರುವಂಥ ತರುಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ ಪ್ರಕಟಣಾವಕಾಶಗಳನ್ನು ಕಲ್ಪಿಸಿಕೊಡಲು ಅನುಕೂಲವಾಗುವಂತೆ ವಿಚಾರಗೋಷ್ಠಿಗಳು, ವಿಚಾರಸಂಕಿರಣಗಳು, ಕಾರ್ಯಶಿಬಿರಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತದೆ.

 

()       ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು :

ಭಾರತೀಯ ಜ್ಞಾನಪೀಠ ಮತ್ತು ಇತರ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿರುವ ಶ್ರೇಷ್ಠ ಸಾಹಿತಿಗಳ ಪ್ರಾತಿನಿಧಿಕ ರಚನೆಗಳ ಸಂಚಯಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಹೊರತರಲು ಉದ್ದೇಶಿಸಿದ್ದು, ಈಗಾಗಲೇ ಕುವೆಂಪು ಸಂಚಯ ಮತ್ತು ಪು.ತಿ.ನ ಸಂಚಯಗಳನ್ನು ಹೊರತರಲಾಗಿದ್ದು, ಇವುಗಳ ಇಂಗ್ಲಿಷ್ ಮತ್ತು ಹಿಂದೀ ಆವೃತ್ತಿಗಳನ್ನು ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಮತ್ತು ಕುವೆಂಪು ಸಂಚಯ ಮತ್ತು ಪು.ತಿ.ಸಂಚಯಗಳ ಮಾದರಿಯಲ್ಲಿಯೇ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಂಚಯ’, ‘ಗೋಕಾಕ್ ಸಂಚಯ’, ‘ಮಾಸ್ತಿ ಸಂಚಯ’, ‘ಕಾರಂತ ಸಂಚಯ ಮತ್ತು ಯು.ಆರ್.ಅನಂತಮೂರ್ತಿ ಸಂಚಯ ಮುಂತಾದ ಪ್ರಸಿದ್ಧ ಲೇಖಕರ ಸಂಚಯಗಳನ್ನು ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವುಗಳ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಸಹ ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ.

 

()       ರಾಷ್ಟ್ರೀಯ ಪ್ರಶಸ್ತಿ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ರಾಷ್ಟ್ರಮಟ್ಟದಲ್ಲಿ
ಶ್ರೀ ಕುವೆಂಪು ಅವರ ಹೆಸರಿನಲ್ಲಿರಾಷ್ಟ್ರಮಟ್ಟದ ಪ್ರಶಸ್ತಿ’ಯೊಂದನ್ನು ಸ್ಥಾಪಿಸಿ, ರೂ.5.00 ಲಕ್ಷ ಮೊತ್ತದ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಮಟ್ಟದ/ನಾಡಿನ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಲು ಒಂದು ತಜ್ಞ ಸಮಿತಿಯನ್ನು ರಚಿಸಿ, ನೀತಿ-ನಿಯಮಾವಳಿಗಳನ್ನು ರೂಪಿಸಿ ಅದರ ಆಧಾರದ ಮೇಲೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ಕ್ರಮಕೈಗೊಳ್ಳಲಾಗುವುದು.

 

 ()     ಪ್ರಕಟಣೆಗಳು :

           

‘ಕುವೆಂಪು ಭಾಷಾ ಭಾರತಿ’ಯ ಅಂಗವಾಗಿ ಸ್ಥಾಪಿಸಲಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕಳೆದ ವರ್ಷವಷ್ಟೇ 56 ಪುಸ್ತಕಗಳನ್ನು ಹೊರತಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ಘಾಟನೆಯ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಸಂಪುಟ-1 ಸೇರಿದಂತೆ, 10 ಪುಸ್ತಕಗಳನ್ನು ಮುದ್ರಣ ಮಾಡಿ ಬಿಡುಗಡೆ ಮಾಡಲಾಗಿದೆ. ಕನ್ನಡ ಪ್ರಕಾಶನದ ಕ್ಷೇತ್ರದಲ್ಲಿಯೂ, ಮಹತ್ವದ ಹೆಜ್ಜೆಗುರುತುಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮೂಡಿಸುತ್ತ ಮುನ್ನಡೆಯಲಿದೆ.  

ಕನ್ನಡ ಭವನದ ಆವರಣದಲ್ಲಿರುವ ಸಿರಿಗನ್ನಡ ಪುಸ್ಕ ಮಳಿಗೆಯಲ್ಲಿ ಪ್ರಾಧಿಕಾರದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.

 

ಕಲಾಗ್ರಾಮದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿಯಲ್ಲಿ ಪುಸ್ತಕಗಳ ದಾಸ್ತಾನು ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ ಹಾಗೂ ಸುವವ್ಯಸ್ಥಿತವಾದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

 

            (ಬಿ)       ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸ್ಥಾಪನೆಯ ಮೂಲ ಧ್ಯೇಯೋದ್ದೇಶಗಳು

ಈ ಕೆಳಕಂಡಂತೆ ಇವೆ :

(1)      ಜ್ಞಾನಪೀಠ ಪ್ರಶಸ್ತಿ, ರಾಜ್ಯ, ರಾಷ್ಟ್ರಮಟ್ಟದ ಸಾಹಿತ್ಯ ಪ್ರಶಸ್ತಿ ಪುರಸ್ಕೃತರ ಮತ್ತು ಶ್ರೇಷ್ಠ ಸಾಹಿತಿ/ಲೇಖಕರುಗಳ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಭಾಷೆಗಳಲ್ಲಿ ಅನುವಾದಿಸಿ ಪ್ರಚುರ ಪಡಿಸುವುದು.  ಅಂತೆಯೇ ಇತರ ರಾಷ್ಟ್ರೀಯ ಮಹತ್ವದ ಸಾಹಿತಿ/ಲೇಖಕರ ಕೃತಿಗಳನ್ನು ಕನ್ನಡಕ್ಕೆ ತರುವುದು.

(2)        ಬೇರೆ ಭಾಷೆಗಳ ಅತ್ಯುತ್ತಮ ಸಾಹಿತ್ಯಿಕ ಮೌಲ್ಯವುಳ್ಳ ಅಪರೂಪದ ಪ್ರಾಚೀನ ಮತ್ತು ಆಧುನಿಕ ಹಾಗೂ ಸಮಕಾಲೀನ ಸಾಹಿತ್ಯ, ಉತ್ತಮ ಜನಪ್ರಿಯ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸುವುದು.  ಅಂತೆಯೇ ಕನ್ನಡದ ಈ ಬಗೆಯ ಮೌಲಿಕ ಕೃತಿಗಳನ್ನು ಬೇರೆ-ಬೇರೆ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸುವುದು.

(3)      ವಿಜ್ಞಾನ, ತಂತ್ರ-ವಿಜ್ಞಾನ, ಮಾನವಿಕ ವಿಷಯಗಳು ಹಾಗೂ ಕಲೆಗಳಿಗೆ ಸಂಬಂಧಪಟ್ಟಂತೆ, ಇಂಗ್ಲಿಷ್ ಮತ್ತಿತರ ವಿದೇಶಿ ಭಾಷೆಗಳಲ್ಲಿನ ಮೂಲಭೂತ ಶೈಕ್ಷಣಿಕ ಪುಸ್ತಕಗಳನ್ನು, ವಿವಿಧ ಭಾರತೀಯ ಭಾಷೆಗಳಲ್ಲಿರಬಹುದಾದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಪ್ರಕಟಿಸುವುದು.

(4)      ರಾಷ್ಟ್ರೀಯ ಮಹತ್ವದ ಸಾಹಿತ್ಯಿಕ-ಸಾಂಸ್ಕೃತಿಕ ವಿಚಾರಗಳನ್ನು ಕುರಿತಂತೆ ಅಖಿಲ ಭಾರತ ಮಟ್ಟದ ವಿಚಾರಗೋಷ್ಠಿ, ಸಂವಾದ, ಕಮ್ಮಟ, ವಿಚಾರಸಂಕಿರಣ, ತರಬೇತಿಗಳನ್ನು ಏರ್ಪಡಿಸುವುದು. ಅಗತ್ಯವೆನಿಸಿದಲ್ಲಿ ಇಂಥ ವಿಚಾರಗೋಷ್ಠಿಗಳ ನಡೆವಳಿಗಳನ್ನು ಪ್ರಕಟಿಸುವುದು.

(5)        ()     ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಂಗವಾಗಿ ತೌಲನಿಕ ಸಾಹಿತ್ಯ ಅಧ್ಯಯನ ಮತ್ತು ಭಾಷಾಂತರ ಸಂಬಂಧವಾದ ಡಿಪ್ಲೊಮಾ ಶಿಕ್ಷಣದ ಕೋರ್ಸುಗಳನ್ನು ಆರಂಭಿಸುವುದು. ಅದರಲ್ಲಿ (1) ಭಾಷಾಂತರ ಮತ್ತು ಪತ್ರಿಕೋದ್ಯಮ, (2) ಭಾಷಾಂತರ ಮತ್ತು ವಿಜ್ಞಾನ-ತಂತ್ರಜ್ಞಾನ ಸಾಹಿತ್ಯ, (3) ಭಾಷಾಂತರ ಮತ್ತು ಕಾನೂನು ಹಾಗೂ (4) ಭಾಷಾಂತರ ಮತ್ತು ವೈದ್ಯಕೀಯ ಇತ್ಯಾದಿ ಶಿಕ್ಷಣಗಳಿಗೆ ಸಂಬಂಧಿಸಿದಂತೆ ಪಠ್ಯಕ್ರಮಗಳನ್ನು ರೂಪಿಸಿ, ಅವಕ್ಕೆ ವಿಶ್ವವಿದ್ಯಾನಿಲಯದ ಮಾನ್ಯತೆಯನ್ನು ಪಡೆದುಕೊಳ್ಳುವುದು. ಜೊತೆಗೆ ವಿದೇಶೀ ಭಾಷೆಗಳ ಶಿಕ್ಷಣದ ಕೋರ್ಸುಗಳ ವ್ಯವಸ್ಥೆಯನ್ನು ಮಾಡುವುದು.

 

()     ಈ ಶಿಕ್ಷಣಗಳನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಮಾದರಿಯಲ್ಲಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ನಡೆಸಬಹುದು. ಈ ಸಂಬಂಧವಾದ ಉಪನ್ಯಾಸ, ಪ್ರಾಯೋಗಿಕ ಕಾರ್ಯಗಳು, ಪರೀಕ್ಷಾ ಸಂಬಂಧಿ ಕಾರ್ಯಗಳಿಗೆ ಸೂಕ್ತ ಸಂಭಾವನೆಯನ್ನು ಪ್ರಾಧಿಕಾರದಿಂದಲೇ ನಿಗದಿಗೊಳಿಸಿಕೊಳ್ಳಬಹುದು.

 

()     ವೈವಿಧ್ಯಮಯ ಶಿಕ್ಷಣಕ್ರಮಗಳನ್ನು ಒಳಗೊಂಡಂತೆ `ಭಾಷಾ-ಭಾರತಿ'ಯನ್ನು ಒಂದು ಮಿನಿ ವಿಶ್ವವಿದ್ಯಾಲಯವಾಗಿ ರೂಪಿಸುವುದು. ಆ ಮೂಲಕ ಸಂಬಂಧವಾಗಿ ಶಿಕ್ಷಣಗಳನ್ನು ನಡೆಸುವುದಲ್ಲದೆ, ಪರೀಕ್ಷೆಗಳನ್ನು ನಡೆಸುವ, ಪದವಿಗಳನ್ನು ನೀಡುವ, ಪದವಿ ವಿತರಣೆ ಸಮಾರಂಭವನ್ನು ನಡೆಸುವ ಅಧಿಕಾರ ಪ್ರಾಧಿಕಾರಕ್ಕೆ ಇರುವುದು.

 

() ಆಡಳಿತಾತ್ಮಕ ಕಾರ್ಯಗಳಿಗೆ ಪ್ರಾಧಿಕಾರಕ್ಕೆ ಮಂಜೂರು ಮಾಡಲಾಗುವ ಸಿಬ್ಬಂದಿಯ ಮೂಲಕ ಅಥವಾ ಅಗತ್ಯವೆನಿಸಿದಲ್ಲಿ ಪ್ರಾಧಿಕಾರದ ಅನುಮೋದನೆಯ ಮೇರೆಗೆ ಹೊರಗುತ್ತಿಗೆಯ ಸೇವೆಯ ನೇಮಕದೊಂದಿಗೆ ಕಾರ್ಯನಿರ್ವಹಿಸಿಕೊಳ್ಳುವುದು.

 

(6)      ಅನುವಾದಿತ ಪುಸ್ತಕಗಳ ಪ್ರಕಟಣೆಗೆ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಅಂಶಿಕ/ಪುರ್ಣ ಧನಸಹಾಯ, ಸಾಲ, ಮುಂತಾದ ಆರ್ಥಿಕ ನೆರವು ನೀಡುವಂಥ ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಳ್ಳುವುದು.

 

(7)      ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಬಗೆಯ ಅನುವಾದಿತ ಪುಸ್ತಕಗಳು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸೂಕ್ತವ್ಯವಸ್ಥೆ ಮಾಡುವುದು.

 

(8)      ಪ್ರಾಧಿಕಾರದಲ್ಲಿ ಭಾಷಾಂತರ ಪ್ರಕಟಣೆಗಳ ಕೇಂದ್ರ ಗ್ರಂಥಾಲಯವೊಂದನ್ನು ಸ್ಥಾಪಿಸುವುದು.

 

(9)        ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಂದ, ರಾಷ್ಟ್ರಮಟ್ಟದ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳಿಂದ ಲಭಿಸಬಹುದಾಗಿರುವ ನೆರವನ್ನು ಪಡೆದುಕೊಳ್ಳಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು.

(10)    ಅನ್ಯ ರಾಜ್ಯಗಳ ಭಾಷೆ ಮತ್ತು ಸಂಸ್ಕೃತಿ ಇಲಾಖೆಗಳೊಡನೆ ಸಂಪರ್ಕ ಸಂಬಂಧವನ್ನು              ಸ್ಥಾಪಿಸಿಕೊಂಡು, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ವಿನಿಮಯದ ಕಾರ್ಯಕ್ರಮಗಳನ್ನು ಏರ್ಪಡಿಸುವುದು.

 

(11)    ಕನ್ನಡದ ಶ್ರೇಷ್ಠ ಗ್ರಂಥಗಳನ್ನು ಇತರ ಭಾಷೆಗಳಲ್ಲಿ ಪ್ರಕಟಿಸಲು ಆಯಾ ರಾಜ್ಯ ಸರ್ಕಾರಗಳಿಂದ ಸಹಾಯಧನವನ್ನು ಪಡೆದುಕೊಳ್ಳುವುದು.

 

(12)    ಅನುವಾದ ಕಾರ್ಯಗಳಿಗೆ ಅಗತ್ಯವಾಗಿರುವ ಮೂಲಭೂತ ಶಬ್ದಗಳನ್ನು ಒಳಗೊಂಡಿರುವ ದ್ವಿಭಾಷಾ/ಬಹುಭಾಷಾ ಕೋಶಗಳನ್ನು, ಸಮಾನಾರ್ಥಕ/ ಭಿನ್ನಾರ್ಥಕ ಶಬ್ದಕೋಶಗಳನ್ನು, ಗಾದೆಗಳ ಮತ್ತು ನುಡಿಗಟ್ಟುಗಳ ಕೋಶಗಳನ್ನು ಸಿದ್ಧಪಡಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು. ಈ ಸಂಬಂಧವಾಗಿ ಕೇಂದ್ರೀಯ ಹಿಂದೀ ನಿರ್ದೇಶನಾಲಯ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಮತ್ತು ಇತರ ಸಂಸ್ಥೆಗಳ ಸಹಾಯ-ಸಹಕಾರಗಳನ್ನು ಪಡೆದುಕೊಳ್ಳುವುದು ಹಾಗೂ ಅವುಗಳಲ್ಲಿ ಪ್ರಚಲಿತವಾಗಿರುವ ನಿಯಮಗಳನ್ನು ಯಥೋಚಿತವಾಗಿ ಅಳವಡಿಸಿಕೊಳ್ಳುವುದು.

 

(13)   ಕನ್ನಡ ಭಾಷೆಗೆ ಭಾರತೀಯ ಸಾಹಿತ್ಯ ಹಾಗೂ ವಿಶ್ವ ಸಾಹಿತ್ಯವನ್ನು ಅನುವಾದಿಸಿ, ಕನ್ನಡ ಪುಸ್ತಕಗಳನ್ನು ಪ್ರಕಟಿಸುವಂತಹ ಮತ್ತು ಕನ್ನಡ ಪುಸ್ತಕೋದ್ಯಮದ ಅಭಿವೃದ್ಧಿಗಾಗಿ ಶ್ರಮಮಿಸುತ್ತಿರುವಂಥ ಇತರೆ ಸರ್ಕಾರಿ, ಅರೆ ಸರ್ಕಾರಿ, ಅನುದಾನ ಪಡೆಯುವ ಸ್ವಾಯತ್ತ ಖಾಸಗಿ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ  ಧ್ಯೇಯೋದ್ದೇಶಗಳಿಗೆ ಪುರಕವಾಗಿ ಕೈಗೊಳ್ಳುವಂಥ ಕಾರ್ಯಚಟುವಟಿಕೆಗಳಲ್ಲಿ ಸಹಕರಿಸುವುದು.

 

(14)   ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಾರ್ಯಾಚರಣೆಗಳ ಹಾಗೂ ಧ್ಯೇಯೋದ್ದೇಶಗಳ ಸಾಧನೆಗಾಗಿ ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಇತರ ರಾಜ್ಯ ಸರ್ಕಾರಗಳಿಂದ ಹಾಗೂ ಅನುದಾನ ಪಡೆಯುವ ಸ್ವಾಯತ್ತ, ಅರೆ ಸರ್ಕಾರಿ ಖಾಸಗಿ ಮತ್ತು ವಿದೇಶಗಳಲ್ಲಿರುವ ಸಂಘ-ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಹಾಗೂ ಅವುಗಳಿಂದ ಮತ್ತು ಖಾಸಗಿ ವ್ಯಕ್ತಿಗಳಿಂದ ಅನುದಾನಗಳು, ಕೊಡುಗೆಗಳು, ದತ್ತಿಗಳು ಮತ್ತು ಇತರ ಯಾವುದೇ ರೀತಿಯಲಿ್ಲ  ನಿಧಿಗಳನ್ನು ಸಂಗ್ರಹಿಸುವುದು.  ಹೀಗೆ ಸಂಗ್ರಹಿಸಿದ ನಿಧಿಯನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯೋದ್ದೇಶಗಳಿಗೆ ಅನುಗುಣವಾಗಿ ಬಳಸಿಕೊಳ್ಳುವುದು ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, ಕರ್ನಾಟಕ ಆರ್ಥಿಕ ಸಂಹಿತೆ, ಸಾದಿಲ್ವಾರು ಸಂಹಿತೆ ಪ್ರಕಾರ ಖರ್ಚು-ವೆಚ್ಚದ ವಿವರಗಳನ್ನು ಇಡುವುದು. ವಂತಿಕೆ ಹಾಗೂ ದಾನ ಕೊಟ್ಟವರು ಅಪೇಕ್ಷಿಸಿದಲ್ಲಿ ಅವರ ವಂತಿಕೆ ಹಾಗೂ ದಾನದ ಮೊತ್ತದ ಖರ್ಚಿನ ವಿವರಗಳನ್ನು ಲಿಖಿತವಾಗಿ ಅವರಿಗೆ ಒದಗಿಸುವುದು.

 

(15) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಾರ್ಷಿಕ ಆಯ-ವ್ಯಯದಲ್ಲಿ ಶೇಕಡ 75%ರಷ್ಟನ್ನು ಪ್ರಕಟಣೆ ಯೋಜನೆಗಳಿಗೆ ಬಳಸಬೇಕು. ತ£À್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ, ಇತರ ಕಾರ್ಯಗಳನ್ನು ನಿರ್ವಹಿಸಲು ಉಳಿದ ಹಣವನ್ನು ಬಳಸಿಕೊಳ್ಳಬಹುದು.  ಆಯಾ ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಆರ್ಥಿಕ ವರ್ಷದ ಮೊದಲೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಆ ಪ್ರಕಾರವೇ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕು.

 

(16)      ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ರೂ.5.00 ಲಕ್ಷ ಮೊತ್ತದ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸತಕ್ಕದ್ದು. ಭಾರತೀಯ ಭಾಷೆಯ ಯಾವುದೇ ರಾಷ್ಟ್ರ ಖ್ಯಾತಿಯ ಸಾಹಿತಿಗಳು ಇದಕ್ಕೆ ಅರ್ಹರಾಗಿರುತ್ತಾರೆ. ಈ ಸಂಬಂಧವಾದ ಮಾರ್ಗಸೂಚಿಯನ್ನು ಪ್ರಾಧಿಕಾರ ಪ್ರತ್ಯೇಕವಾಗಿ ರಚಿಸಿಕೊಳ್ಳತಕ್ಕದ್ದು.

 

(17)      ಅನುವಾದ ವಿಭಾಗಕ್ಕೆ ಸಂಬಂಧಿಸಿದಂತೆ, ಅನುವಾದಿತ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅನನ್ಯ ಸೇವೆಗಾಗಿ ಪ್ರತಿವರ್ಷ ಐವರು ಪ್ರತಿಷ್ಠಿತ ಅನುವಾದಕರಿಗೆ ಗೌರವ ಪ್ರಶಸ್ತಿಗಳನ್ನು ಕೊಡುವ. ಹಾಗೂ ಐದು ಗ್ರಂಥಗಳಿಗೆ ವರ್ಷದ ಶ್ರೇಷ್ಠ ಅನುವಾದ ಬಹುಮಾನ ಕೊಡುವುದು. ಗೌರವ ಪ್ರಶಸ್ತಿಯ ಮೊತ್ತ ತಲಾ ರೂ.25,000/-ಗಳು ಹಾಗೂ ಗ್ರಂಥ ಬಹುಮಾನದ ಮೊತ್ತ ರೂ.10,000/-ಗಳಾಗಿರಬೇಕು. ಬಹುಮಾನಕ್ಕೆ ಬರುವ ಅನುವಾದ ಪ್ರಕಾರಗಳಲ್ಲಿ ಕನಿಷ್ಟ ಮೂರು ಶೀರ್ಷಿಕೆಗಳಾದರೂ ಬಂದಿರಬೇಕು.

 

(18)    ಪ್ರಾಧಿಕಾರ ತನ್ನ ಉದ್ದೇಶಗಳ ಮುನ್ನಡೆಗಾಗಿ ಅಗತ್ಯವಿರಬಹುದಾದ, ಮೇಲೆ ತಿಳಿಸಿದಂಥ ಧ್ಯೇಯೋದ್ದೇಶಗಳಿಗೆ ಹೊಂದುವಂಥ ಇತರ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವುದು.

 

 1. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರ ವರ್ಗ :

 

          ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಡಳಿತ, ಹಣಕಾಸು ಮತ್ತು ಶೈಕ್ಷಣಿಕ ಸಂಬಂಧಿ ಕೆಲಸಗಳನ್ನು ನಿರ್ವಹಿಸಲು ಈ ಮುಂದಿನಂತೆ ಅಧಿಕಾರಿ ವರ್ಗ ಇದೆ.

 

ಅ) ಅಧ್ಯಕ್ಷರು

ಆ) ರಿಜಿಸ್ಟ್ರಾರ್ (ಆಡಳಿತ)

ಇ) ರಿಜಿಸ್ಟ್ರಾರ್ (ಶೈಕ್ಷಣಿಕ)

ಈ) ಅರ್ಥಸದಸ್ಯರು

 

          )      ಅಧ್ಯಕ್ಷರು :

 

 • ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನಾಮನಿರ್ದೇಶಿಸುತ್ತದೆ ಮತ್ತು ಅವರು ಐದು ವರ್ಷಗಳ ಅಥವಾ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿದ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು. ಹೀಗೆ ಅಧ್ಯಕ್ಷರಾಗಿ ನಾಮನಿರ್ದೇಶಿತರಾದವರು ಯಾವುದೇ ಸಂಸ್ಥೆಯಲ್ಲಿ ಪೂರ್ಣಾವಧಿಗೆ ವೇತನ/ಸಂಭಾವನೆ ಪಡೆಯುವ ಉದ್ಯೋಗಿಯಾಗಿರಬಾರದು.

 

 • ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮುಖ್ಯಸ್ಥರಾಗಿರಬೇಕು. ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಇತರ ಎಲ್ಲ ಸಮಿತಿ ಸಭೆಗಳ ಪದನಿಮಿತ್ತ ಅಧ್ಯಕ್ಷರಾಗಿರಬೇಕು.

 

 • ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದೊಡನೆ ಅಥವಾ ಸಂದರ್ಭಾನುಸಾರ, ಪ್ರತಿ ವರ್ಷಕ್ಕೆ ಗರಿಷ್ಠ ರೂ.1,00,000/-ಗಳೊಳಪಟ್ಟು, ಪ್ರತಿ ಸಂದರ್ಭದಲ್ಲೂ ಪ್ರತಿ ಸಾರಿ ರೂ.25,000/- ರೂಪಾಯಿ ಮಿತಿಯವರೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ದೇಶಗಳಿಗೆ ಒಳಪಟ್ಟಂತೆ ಜರೂರು ಸ್ವರೂಪದ ಯಾವುದೇ ಕಾರ್ಯಕ್ರಮವನ್ನು ನಿರ್ಧರಿಸಲು ಅಧಿಕಾರ ಹೊಂದಿರುವರು. ಆದರೂ ಇಂಥ ವೆಚ್ಚದ ವಿವರಗಳನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಬೇಕು.

 

 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ಸಹ ಕರ್ನಾಟಕ ಸರ್ಕಾರದ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನಕ್ಕೆ ಒದಗಿಸಲಾಗುವ ಎಲ್ಲ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದು. ಅಥವಾ ಪ್ರಾಧಿಕಾರ ನಿಗದಿ ಮಾಡುವ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.

 

)        ರಿಜಿಸ್ಟ್ರಾರ್ (ಆಡಳಿತ) :

 

 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಂಪುರ್ಣ ಆಡಳಿತ ನಿರ್ವಹಣೆ, ಸಿಬ್ಬಂದಿಯ ಮೇಲ್ವಿಚಾರಣೆ ಹಾಗೂ ಲೆಕ್ಕಪತ್ರ ನಿಯಂತ್ರಣದ ಹೊಣೆಗಾರಿಕೆ ರಿಜಿಸ್ಟ್ರಾರ್ (ಆಡಳಿತ) ಇವರು ನೋಡಿಕೊಳ್ಳುವುದು. ಅಲ್ಲದೆ, ಇವರು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಹಾಗೂ ಇತರ ಸಮಿತಿ ಸಭೆಗಳ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹಾಗೂ ಇತರ ಸಮಿತಿ ಸಭೆಗಳನ್ನು ಅಧ್ಯಕ್ಷರ ಸೂಚನೆಯ ಮೇರೆಗೆ ಕರೆಯುವುದು ಮತ್ತು ಸಭಾನಡೆವಳಿಗಳನ್ನು ನಿರ್ವಹಿಸುವುದು ಹಾಗೂ ಈ ಸಂಬಂಧವಾದ ಅನುಸರಣ ಕ್ರಮಗಳನ್ನು ಕೈಗೊಳ್ಳುವುದು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ದಾಖಲೆಗಳನ್ನು ಮತ್ತು ಅಂಥ ಇತರ ಸ್ವತ್ತುಗಳನ್ನು ಸಂರಕ್ಷಿಸುವುದು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ಅಧಿಕೃತ ಪತ್ರ ವ್ಯವಹಾರ, ಕರಾರು ಒಪ್ಪಂದಗಳಿಗೆ ಸಹಿ ಮುಂತಾದ ಕಾರ್ಯಗಳನ್ನು ನಿರ್ವಹಿಸುವುದು.
 • ಚಾಲ್ತಿಯಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಸರ್ಕಾರಿ ಆರ್ಥಿಕ ಸಂಹಿತೆ ಹಾಗೂ ಸಾದಿಲ್ವಾರು ನಿಯಮಗಳ ವ್ಯಾಪ್ತಿಗೊಳಪಟ್ಟು ವೆಚ್ಚವನ್ನು ಭರಿಸುವುದು.
 • ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಹಾಗೂ ಆರ್ಥಿಕ ನಿಯಮಗಳಿಗೊಳಪಟ್ಟು ವಾರ್ಷಿಕ ಕ್ರಿಯಾಯೋಜನೆಯನ್ನು ಅರ್ಥಸದಸ್ಯರ ಸಮಾಲೋಚನೆಯಿಂದ ಪುರ್ವಭಾವಿಯಾಗಿ ತಯಾರಿಸುವ ಮತ್ತು ಸಮಿತಿಯ ಮುಂದೆ ಒಪ್ಪಿಸುವ ಜವಾಬ್ದಾರಿ ಹೊಂದಿರಬೇಕು. ಅನುಮೋದಿತವಾದ ಈ ಕ್ರಿಯಾಯೋಜನೆಯ ಪ್ರಕಾರ ಅನುಷ್ಠಾನಗೊಳಿಸಿ, ಅದರ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮೂಲಕ ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ ಸಲ್ಲಿಸಬೇಕು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಆಡಳಿತಾತ್ಮಕ ಅಧಿಕಾರಗಳನ್ನು ಚಲಾಯಿಸುವುದು.

 

)        ರಿಜಿಸ್ಟ್ರಾರ್ (ಶೈಕ್ಷಣಿಕ)      :

 

 • ಪ್ರಾಧಿಕಾರದ ಅಂಗರಚನೆ, ಧ್ಯೇಯೋದ್ದೇಶಗಳ ಕ್ರಮಸಂಖ್ಯೆ (5)ರಲ್ಲಿರುವ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಸಂಬಂಧ ಕಾರ್ಯನಿರ್ವಹಿಸುವುದು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಿಗೆ ಅಧಿಕೃತ ಪತ್ರ ವ್ಯವಹಾರ ನಡೆಸುವುದು.
 • ಪ್ರಾಧಿಕಾರದ ಪ್ರಕಟಣೆಗಳ ಕೇಂದ್ರ ಗ್ರಂಥಾಲಯದ ವ್ಯವಸ್ಥಿತ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸುವುದು.

 

)       ಅರ್ಥಸದಸ್ಯರು    :

           

 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಅಧೀಕ್ಷಕರು ಪದನಿಮಿತ್ತ ಅರ್ಥಸದಸ್ಯರಾಗಿರಬೇಕು ಮತ್ತು ಇತರ ಸಮಿತಿಗಳ ಸದಸ್ಯರೂ ಆಗಿರುವರು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಯಮಗಳಿಗೆ ಒಳಪಟ್ಟು ಮತ್ತು ರಿಜಿಸ್ಟ್ರಾರ್ ಆಡಳಿತ ಅವರ ಸಹ ಹೊಣೆಗಾರಿಕೆಯಲ್ಲಿ ಬಜೆಟ್ ಸಿದ್ಧಪಡಿಸುವ ಹಾಗೂ ಅನುಮೋದಿತ ಕಾರ್ಯಕ್ರಮಗಳಿಗೆ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ಜವಾಬ್ದಾರರಾಗಿರಬೇಕು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪಾವತಿ ಮಾಡುವ ಹಣಕ್ಕೆ ಸೂಕ್ತ ದಾಖಲೆ ಪಡೆಯುವುದು. ಕ್ರಿಯಾಯೋಜನೆಯ ಪ್ರಕಾರ ಅನುಷ್ಠಾನಗೊಳಿಸಿದ ಬಗ್ಗೆ ಭೌತಿಕ ಮತ್ತು ಆರ್ಥಿಕ ಪ್ರಗತಿಯ ವರದಿಗಳನ್ನು ಸಿದ್ಧಪಡಿಸುವುದು.
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.

 

III.        ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆಯ ಮಾರ್ಗಗಳು ಸೇರಿದಂತೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನ :

 

            ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರ ರಚಿಸಲಾದ ಸಮಿತಿಯು ಪ್ರತಿವರ್ಷ ನಾಲ್ಕು ತಿಂಗಳಿಗೊಮ್ಮೆ ಸಭೆ ಸೇರಿ ಪ್ರಾಧಿಕಾರ ನಡೆಸುವ ಚಟುವಟಿಕೆಗಳ ಬಗ್ಗೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅಂಗರಚನೆಯಲ್ಲಿನ ಮಾರ್ಗಸೂಚಿ ಅನುಸಾರ ಅವುಗಳನ್ನು ಅನುಷ್ಠಾನಗೊಳಿಸುತ್ತಿದೆ.

 

 1. ಪ್ರಾಧಿಕಾರದ ಕಾರ್ಯಗಳ ನಿರ್ವಹಣೆಗೆ ರೂಪಿಸಿರುವ ಸೂತ್ರಗಳು

 

ಪ್ರಾಧಿಕಾರದ ಸಭೆಗಳಲ್ಲಿನ ತೀರ್ಮಾನಗಳು ಮತ್ತು ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಸುತ್ತೋಲೆ, ಆದೇಶಗಳನ್ನು ಅನುಸರಿಸಿ ಕಾರ್ಯನಿರ್ವಹಿಸುತ್ತಿದೆ.

 

 1. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಮಿತಿ ಅಧ್ಯಕ್ಷರು ಹಾಗು ಸದಸ್ಯರುಗಳ ವಿವರ :

            ಪ್ರಸ್ತುತ ಸಮಿತಿ ಇಲ್ಲದ ಕಾರಣ ಶ್ರೀ.ಬಲವಂತರಾವ್ ಪಾಟೀಲ್ ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರನ್ನು ಆಡಳಿತಾಧಿಕಾರಿಗಳನ್ನಾಗಿ ಸರ್ಕಾರ ಅಧಿಸೂಚನೆ ಸಂಖ್ಯೆ : ಕಸಂವಾ  /447/ಕಸಧ/2022 ದಿನಾಂಕ:17.10.2022 ರಲ್ಲಿ ನೇಮಕ ಮಾಡಿರುತ್ತದೆ.

 1. ಪ್ರಾಧಿಕಾರದ ಅಧೀನದಲ್ಲಿರುವ ದಾಖಲಾತಿಗಳ ವರ್ಗೀಕರಣ ವಿವರ :

           

            1)        ಆಡಳಿತ ಮತ್ತು ಲೆಕ್ಕಪತ್ರ ಶಾಖೆ

          2)       ಗಣಕ ಯಂತ್ರ ನಿರ್ವಹಣೆ ಶಾಖೆ

          3)       ಪ್ರಕಟಣೆ ಶಾಖೆ

 

VII.       ಪ್ರಾಧಿಕಾರದ ಕಾರ್ಯನೀತಿ ನಿರೂಪಣೆ ಅಥವಾ ಅದರ ಅನುಷ್ಠಾನಕ್ಕೆ ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಅಥವಾ ಅವರ ಪ್ರಾತಿನಿಧ್ಯವನ್ನು ಹೊಂದಲು ಅಸ್ತಿತ್ವದಲ್ಲಿರುವ ಯಾವುದೇ ವ್ಯವಸ್ಥೆಯ ವಿವರ :

           

            ಪ್ರಾಧಿಕಾರದ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಮಾರ್ಗಸೂಚಿ (ಅಂಗರಚನೆ)ಯನ್ನು ಸರ್ಕಾರ ರೂಪಿಸಿದೆ. ಇದರ ಪ್ರಕಾರ ಸಾರ್ವಜನಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಿದ ತಜ್ಞರನ್ನು ಸದಸ್ಯರನ್ನಾಗಿ ನೇಮಕ ಮಾಡಲು ಪ್ರಾತಿನಿಧ್ಯ ನೀಡಲಾಗಿದೆ.

VIII.      ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಅಥವಾ ಇತರ ನಿಕಾಯಗಳು ಮತ್ತು ಅದರ ಭಾಗವಾಗಿ ಅಥವಾ ಸಲಹೆಯ ಉದ್ದೇಶಕ್ಕಾಗಿ ರಚಿತವಾದ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳನ್ನೊಳಗೊಂಡ ಮಂಡಳಿಗಳ, ಪರಿಷತ್ತುಗಳ, ಸಮಿತಿಗಳ ಮತ್ತು ಇತರ ನಿಕಾಯಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆಯೇ ಅಥವಾ ಅಂತಹ ಸಭೆಗಳ ನಡಾವಳಿಗಳು ಸಾರ್ವಜನಿಕರಿಗೆ ದೊರೆಯುತ್ತವೆಯೇ ಎಂಬುದರ ವಿವರ :

 

ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸರ್ಕಾರ ರಚಿಸಲಾದ ಸಮಿತಿ ಅಸ್ತಿತ್ವದಲ್ಲಿರುತ್ತದೆ. ಈ ಸಭೆಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಆದರೂ ಈ ಸಭೆಗಳಲ್ಲಿನ ನಡೆವಳಿಗಳು ಸಾರ್ವಜನಿಕರು ಅವಗಾಹಿಸಬಹುದಾಗಿದೆ.

 

 

 1. (i) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ವರ್ಗದ ವಿವರ :

 

ಕ್ರ.ಸಂ

ಹೆಸರು ಮತ್ತು ಪದನಾಮ

ವಿದ್ಯಾರ್ಹತೆ

ಮನೆ ವಿಳಾಸ/ದೂರವಾಣಿ ಸಂಖ್ಯೆ

 

1

ಶ್ರೀ ಈಶ್ವರ್.ಕು.ಮಿರ್ಜಿ

ರಿಜಿಸ್ಟ್ರಾರ್

 

ಬಿ.ಇ (ಇ&ಸಿ)

ನಂ.370/1(5) 2ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ ವಿಜಯನಗರ, ಬೆಂಗಳೂರು-40 ದೂ.9342890734

2

ಅಧೀಕ್ಷಕರು (ಖಾಲಿ)

-

 

3

ಪ್ರಥಮ ದರ್ಜೆ ಸಹಾಯಕರು (ಖಾಲಿ)

-

 

4

ಶೀಘ್ರಲಿಪಿಗಾರರು(ಖಾಲಿ)

-

 

5

ದಲಾಯಿತ (ಖಾಲಿ)

-

 

6

ದಲಾಯಿತ (ಖಾಲಿ)

-

 

 

(ii).       ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ವಿವರ :

 

ಕ್ರ.ಸಂ

ಹೆಸರು ಮತ್ತು ಪದನಾಮ

ವಿದ್ಯಾರ್ಹತೆ

ಮನೆ ವಿಳಾಸ / ದೂರವಾಣಿ ಸಂಖ್ಯೆ

 

1.

ಶ್ರೀಮತಿ ಜಿ.ಶೋಭಾಂಬ

ಗಣಕಯಂತ್ರ ನಿರ್ವಾಹಕರು

ಎಂ.ಎ

# 309, 8ನೇ ಮೈನ್, ಸಂಪಿಗೆ ಬಡಾವಣೆ, ವೆಸ್ಟ್‌ ರೇಂಜ್, ಬೆಂಗಳೂರು-79

ದೂ:23183311

 

2

ಶ್ರೀಮತಿ.ಕಮಲ

ಗ್ರಂಥಪಾಲಕರು

 

 

3

ಶ್ರೀ ಕರೀಗೌಡ

‘ಡಿ’ ಗ್ರೂಪ್

 

ಏಳನೇ ತರಗತಿ

ಕೇರಾಫ್. ಕರಿಯಪ್ಪ ಎ.ಐ.ಟಿ ಮುಂಭಾಗ, ಕೆಂಗುಂಟೆ ಬಡಾವಣೆ, ಮಲ್ಲತ್ತಹಳ್ಳಿ,

ಬೆಂಗಳೂರು-560056

4

ಶ್ರೀ ಹರೀಶ

‘ಡಿ’ ಗ್ರೂಪ್

ಪಿ.ಯು.ಸಿ

12ಬಿ, ಆಂದ್ರಹಳ್ಳಿ, ಶ್ರೀಚಕ್ರನಗರ

ಬೆಂಗಳೂರು-560091

 

 

 1. (i) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರಿ ಸಿಬ್ಬಂದಿ ವರ್ಗದ ವೇತನದ ವಿವರ :

 

ಕ್ರ.ಸಂ

ಹೆಸರು ಮತ್ತು ಪದನಾಮ

ಮೊತ್ತ

2.

ಶ್ರೀ ಈಶ್ವರ್.ಕು.ಮಿರ್ಜಿ

ರಿಜಿಸ್ಟ್ರಾರ್

 

ರೂ.64778-00

4

ಅಧೀಕ್ಷಕರು (ಖಾಲಿ)

 

5

ಪ್ರಥಮ ದರ್ಜೆ ಸಹಾಯಕರು (ಖಾಲಿ)

-

6

ಶೀಘ್ರಲಿಪಿಗಾರರು(ಖಾಲಿ)

-

7

ದಲಾಯಿತ (ಖಾಲಿ)

-

8.

ದಲಾಯಿತ (ಖಾಲಿ)

-

 

(ii).       ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ಖಾಲಿ ಹುದ್ದೆಗೆ ಅನುಗುಣವಾಗಿ ಹೊರಗುತ್ತಿಗೆ ಸೇವೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದ ಮಾಸಿಕ ಸಂಭಾವನೆ ವಿವರ :

 

ಕ್ರ.ಸಂ

ಹೆಸರು ಮತ್ತು ಪದನಾಮ

ಮೊತ್ತ

 

1.

ಶ್ರೀಮತಿ ಜಿ.ಶೋಭಾಂಬ

ಗಣಕಯಂತ್ರ ನಿರ್ವಾಹಕರು

ರೂ.30,000-00 (ಮಾಸಿಕ)

2

ಶ್ರೀಮತಿ.ಕಮಲ

ಗ್ರಂಥಪಾಲಕರು

ರೂ.30,000-00 (ಮಾಸಿಕ)

3

ಶ್ರೀ ಕರೀಗೌಡ

‘ಡಿ’ ಗ್ರೂಪ್

ರೂ.15250-00 (ಮಾಸಿಕ)

4

ಶ್ರೀ ಹರೀಶ

‘ಡಿ’ ಗ್ರೂಪ್

ರೂ. 15250-00 (ಮಾಸಿಕ)

 

 1. ಪ್ರಾಧಿಕಾರದ ಯೋಜನೆಗಳ ವಿವರ ಸೂಚಿಸುವ ಪ್ರಸ್ತಾವಿತ ವೆಚ್ಚಗಳು ಮತ್ತು ಮಾಡಲಾದ ಬಟವಾಡೆಗಳ ವರದಿ ವಿವರಗಳು :

           

ಕ್ರ.ಸಂ

ವರ್ಷ

ಯೋಜನೆಯ ವಿವರ

ಯೋಜನೆಗೆ ಒದಗಿಸಿದ ಮೊತ್ತ

ಖರ್ಚಾದ ಅನುದಾನ

ಉಳಿಕೆ ಮೊತ್ತ

1.

2009-10

 

ಪ್ರಾಧಿಕಾರದ ನಿರ್ವಹಣೆ

ಹಾಗೂ ವಾರ್ಷಿಕ ಚಟುವಟಿಕೆಗಳಿಗೆ ಅನುದಾನ

70.00 ಲಕ್ಷ

 

 

 

 

2.

2010-11

ಪ್ರಾಧಿಕಾರದ ನಿರ್ವಹಣೆ

ಹಾಗೂ ವಾರ್ಷಿಕ ಚಟುವಟಿಕೆಗಳಿಗೆ ಅನುದಾನ

50-00 ಲಕ್ಷ

 

 

 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರಾತಿನಿಧಿಕ ರಚನೆಗಳ ಪ್ರಕಟಣೆ ಮತ್ತು ಮುದ್ರಣ

100-00 ಲಕ್ಷ

 

 

 

ಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಪುಸ್ತಕಗಳ ಮುದ್ರಣಕಾರ್ಯಕ್ಕಾಗಿ

 

30-00 ಲಕ್ಷ

 

 

 

ಪಂಡಿತ್ ದೀನ್ ದಯಾಳ್ ಉಪಾದ್ಯಾಯ ಅವರ ಸಮಗ್ರ ಕೃತಿಗಳ ಮುದ್ರಣ ಕಾರ್ಯ

20.00 ಲಕ್ಷ

 

 

 

ಕನಕದಾಸರ ಕೃತಿಗಳ ಅನುವಾದ ಮತ್ತು ಮುದ್ರಣ ಕಾರ್ಯಕ್ಕಾಗಿ

24.00 ಲಕ್ಷ

 

 

3.

2011-12

ಪ್ರಾಧಿಕಾರದ ನಿರ್ವಹಣೆ

ಹಾಗೂ ವಾರ್ಷಿಕ ಚಟುವಟಿಕೆಗಳಿಗೆ ಅನುದಾನ

150-00 ಲಕ್ಷ

 

 

 

 

 

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪ್ರಾತಿನಿಧಿಕ ರಚನೆಗಳ ಪ್ರಕಟಣೆ ಮತ್ತು ಮುದ್ರಣ

80-00 ಲಕ್ಷ

 

 

4

 

2012-13

 

 

 

 

5

2013-14

 

 

 

 

6

2014-15

 

 

 

 

7

2015-16

 

 

 

 

8

2016-17

 

 

 

 

9

2017-18

 

 

 

 

10

2018-19

 

 

 

 

11

2019-20

 

 

 

 

12

2020-21

 

 

 

 

13

2021-22

 

 

 

 

14

2022-23

 

 

 

 

 

 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಮೇಲ್ಕಂಡಂತೆ ಒದಗಿಸಿದ ಅನುದಾನವನ್ನು ಬಳಕೆಮಾಡಿ ಈ ಕೆಳಕಂಡ ಪ್ರಕಟಣೆಗಳನ್ನು ಹೊರತಂದಿದೆ.

ಕ್ರ. ಸಂ

ಪುಸ್ತಕದ ಹೆಸರು

ಬೆಲೆ

1

ನಾಗರಿಕತೆಯ ಕಥೆ ಸಂಪುಟ-1

1,000

2

ನಾಗರಿಕತೆಯ ಕಥೆ ಸಂಪುಟ-2

1,000

3

ನಾಗರಿಕತೆಯ ಕಥೆ ಸಂಪುಟ-3

1,000

4

ನಾಗರಿಕತೆಯ ಕಥೆ ಸಂಪುಟ-4

1,000

5

ನಾಗರಿಕತೆಯ ಕಥೆ ಸಂಪುಟ-5

1,000

6

ನಾಗರಿಕತೆಯ ಕಥೆ ಸಂಪುಟ-6

1,000

7

ನಾಗರಿಕತೆಯ ಕಥೆ ಸಂಪುಟ-7

1,000

8

ನಾಗರಿಕತೆಯ ಕಥೆ ಸಂಪುಟ-8

1,000

9

ನಾಗರಿಕತೆಯ ಕಥೆ ಸಂಪುಟ-9

1,000

10

ನಾಗರಿಕತೆಯ ಕಥೆ ಸಂಪುಟ-10

1,000

11

ನಾಗರಿಕತೆಯ ಕಥೆ ಸಂಪುಟ-11

1,000

12

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-1 (ಪರಿಷ್ಕರಣೆ) 2018

50

13

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-2 (ಪರಿಷ್ಕರಣೆ) 2018

50

14

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-3 (ಪರಿಷ್ಕರಣೆ) 2018

50

15

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-4 (ಪರಿಷ್ಕರಣೆ) 2018

50

16

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳುಸಂಪುಟ-5 (ಪರಿಷ್ಕರಣೆ) 2018

50

17

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-6 (ಪರಿಷ್ಕರಣೆ) 2018

50

18

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-7 (ಪರಿಷ್ಕರಣೆ) 2018

50

19

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-8 (ಪರಿಷ್ಕರಣೆ) 2018

50

20

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-9 (ಪರಿಷ್ಕರಣೆ) 2018

50

21

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-10 (ಪರಿಷ್ಕರಣೆ) 2018

50

22

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-11 (ಪರಿಷ್ಕರಣೆ) 2018

50

23

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-12(ಪರಿಷ್ಕರಣೆ) 2018

50

24

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-13(ಪರಿಷ್ಕರಣೆ) 2018

50

25

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-14 ( ಪರಿಷ್ಕರಣೆ) 2018

50

26

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳುಸಂಪುಟ-15(ಪರಿಷ್ಕರಣೆ) 2018

50

27

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-16 (ಪರಿಷ್ಕರಣೆ) 2018

50

28

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-17 (ಪರಿಷ್ಕರಣೆ) 2018

50

29

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-18 (ಪರಿಷ್ಕರಣೆ) 2018

50

30

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-19 (ಪರಿಷ್ಕರಣೆ) 2018

50

31

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-20 (ಪರಿಷ್ಕರಣೆ) 2018

50

32

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-21 (ಪರಿಷ್ಕರಣೆ) 2018

50

33

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-22 (ಪರಿಷ್ಕರಣೆ) 2018

50

34

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಪಾಲಿ ಭಾಷೆಯ ವ್ಯಾಕರಣ

50

35

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಪಾಲಿ ಕನ್ನಡ ಪದಕೋಶ

50

36

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳುಸಮಗ್ರ ವಿಷಯಸೂಚಿ

50

37

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-1

125

38

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-2

125

39

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-3

125

40

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-4

125

41

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-5

125

42

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-6

125

43

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-7

125

44

ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ
- ಸಮಗ್ರ-ಬರೆಹಗಳು ಸಂಪುಟ-8

125

45

ನಿರ್ವಾಣ

30

46

ಬೌದ್ಧಧರ್ಮದ ಕೇಂದ್ರ ಪರಿಕಲ್ಪನೆ

75

47

ಸರಹದ್ದುಗಳಿಲ್ಲದ ಸಂತ -ಸ್ವಾಮಿ ರಂಗನಾಥನಂದರನ್ನು ಕುರಿತ ನೆನಪುಗಳು

250

48

ಗಾಂಧೀಜಿ: ವ್ಯಕ್ತಿತ್ವ ಮತ್ತು ಜೀವನಧ್ಯೇಯ

10

49

ಗಾಂಧೀಜಿ ಅರ್ಥಶಾಸ್ತ್ರ

10

50

ಬ್ರಿಟಿಷ್ ಸಾಮ್ರಾಜ್ಯವಾದ ಮತ್ತು ಭಾರತೀಯ ರಾಷ್ಟ್ರೀಯತೆ

10

51

ಕಾಯಕ ಸಿದ್ಧಾಂತ

10

52

ಭಾರತದ ಅಮೂಲ್ಯ ಪರಂಪರೆ

10

53

ಕೆಲವು ಪ್ರಜ್ಞಾವಸ್ಥೆಗಳು

10

54

ನಮ್ಮ ಧರ್ಮ

10

55

ನಮ್ಮ ಮಾತೃಭೂಮಿ

10

56

ಭಾಷೆ ಆಧಾರದ ಮೇಲೆ ಭಾರತದಛಿದ್ರತೆ; ಇನ್ನಾದರೂ ನಿಲ್ಲಬಾರದೇಕೆ?

10

57

ಸತ್ಯಾನ್ವೇಷಣೆಗೆ ಉತ್ತರ

10

58

ಹಿಂದೂ ಶಾಸ್ತ್ರಗಳು ಮತ್ತು ಸಂಸ್ಕಾರಗಳು

10

59

ಹಿಂದೂ ಆದರ್ಶಗಳು

10

60

ಕಾನೂನು ಮತ್ತು ಸಂಸ್ಕೃತಿ

10

61

ವೈದಿಕ ಧರ್ಮದಲ್ಲಿ ಆತ್ಮ ಮತ್ತು ಬ್ರಹ್ಮ

10

62

ಕ್ರಾಂತಿಕಾರಕ ಸರ್ವೋದಯ

10

63

ಭಾರತದ ಚರಿತ್ರೆಯಲ್ಲಿ ಭೌಗೋಳಿಕ ಅಂಶಗಳು

10

64

ಶ್ರೇಷ್ಠ ಚೈತನ್ಯಗಳ ವೈಭವ (ಶ್ರೇಣಿ-2)

10

65

ಶ್ರೇಷ್ಠ ಚೈತನ್ಯಗಳ ವೈಭವ (ಶ್ರೇಣಿ-3)

10

66

ಜ್ಞಾನದೇವನ ಬೋಧನೆಗಳು

10

67

ತುಕಾರಾಮರ ಬೋಧನೆಗಳು

10

68

ಶ್ರೀ ವಿದ್ಯೆಯ ಸಾರ

10

69

ಭಾರತ ಮತ್ತು ಶೀತಲ ಸಮರ

10

70

ಅನಂತದ ಕಡೆಗೆ ಚಿಂತನೆ (ಶ್ರೇಣಿ-1)

10

71

ಮಾರ್ಗವಿಲ್ಲದ ಮಾರ್ಗ

10

72

ಎಲ್ಲಾ ಧರ್ಮಗಳ ಸಾರವೂ ಒಂದೇ

10

73

ನಮ್ಮ ಸಂಸ್ಕೃತಿ

10

74

ಆಧುನಿಕ ಭಾರತದತ್ತ ಫ್ರಾನ್ಸ್ನ ನೋಟ

10

75

ನನ್ನ ಬಾಳಿನೊಳಗೆ ಭಗವಂತ ಹೇಗೆ
ಪ್ರವೇಶಿಸಿದ (ಶ್ರೇಣಿ-2)

10

76

ನಿಮ್ಮ ಅಭ್ಯಾಸವನ್ನು ಬದಲಿಸಿ ಮತ್ತು ಆಹಾರ ಉಳಿಸಿ

10

77

ಭೂಮಿಯ ಮೇಲೆ ಶಾಂತಿ

10

78

ಭಾರತದ ಮೂಲಭೂತ ಏಕತೆ

10

79

ಜೀವನದ ಹರಿವಿನಿಂದ

10

80

ಭಾರತೀಯ ರಾಜಕೀಯ ಚಿಂತನೆಯಲ್ಲಿ ಪರಮಾಧಿಕಾರ ಮತ್ತು ರಾಜ್ಯದ ಕಲ್ಪನೆಗಳು

10

81

ಗಾಂಧೀಜಿ: ಒಬ್ಬ ಅನುಷ್ಠಾನ ತತ್ವದರ್ಶಿ

10

82

ನೈಜ ಸುಖಕ್ಕೆ ಖಚಿತ ಪಥ

10

83

ಸಂಸ್ಕೃತ ಮತ್ತು ವಿಜ್ಞಾನ

10

84

ಹೊಸ ದರ್ಶನ ಮತ್ತು ವಾಸ್ತವತೆ

10

85

ಅಹಂ ಅನ್ನು ಅಳಿಸಿ ಹಾಕಿ

10

86

ಭಾರತೀಯ ಇತಿಹಾಸದ ನಿರ್ಣಾಯಕ ಕಾಲಾವಧಿಗಳು

10

87

ಮನು: ಸಾಮಾಜಿಕ ಚಿಂತನೆಗಳ ಮೂಲಪುರುಷ

10

88

ಅರವಿಂದರ ಬೋಧನೆಗಳು

10

89

ಐವರು ಸಂತರು

10

90

ಧರ್ಮಶಾಸಕ ಅಯ್ಯಪ್ಪನ್

10

91

ಅನಂತದ ಕಡೆಗೆ ಚಿಂತನೆ (ಶ್ರೇಣಿ-2)

10

92

ನಮ್ಮದೇಶದ ಆಧ್ಯಾತ್ಮಿಕ ವ್ಯಕ್ತಿಗಳು: ಒಂದು ನೋಟ

10

93

ಆಧುನಿಕ ಭಾರತಕ್ಕೆ ನಮ್ಮ ಪರಂಪರೆಯ ಅಗತ್ಯ

10

94

ನಮ್ಮ ಧರ್ಮದ ಕೆಲವು ಅಂಶಗಳು

10

95

ಉಪನಿಷತ್ತುಗಳು*

10

96

ಭಾರತದ ಸಂದೇಶ ಮತ್ತು ಗುರಿ

10

97

ನೂರೊಂದು ಪ್ರಾಚೀನ ಋಷಿಗಳ ಕಿರು ಪರಿಚಯ*

10

98

ಕಥಾ ಸರಿತ್ಸಾಗರ (ಸಂಪುಟ-1) (ಲಂಬಕ: ಕಥಾಪೀಠ)

50

99

ಕಥಾ ಸರಿತ್ಸಾಗರ (ಸಂಪುಟ-2)
(ಲಂಬಕ: ಕಥಾಮುಖ ಮತ್ತು ಲಾವಣಕ)

100

100

ಕಥಾ ಸರಿತ್ಸಾಗರ (ಸಂಪುಟ-3)
(ಲಂಬಕಗಳು: ನರವಾಹನದತ್ತಜನನ, ಚರ್ತುದಾರಿಕಾ)

80

101

ಕಥಾ ಸರಿತ್ಸಾಗರ (ಸಂಪುಟ-4)
(ಲಂಬಕ: ಮದಮಮಂಚುಕಾ)

90

102

ಕಥಾ ಸರಿತ್ಸಾಗರ (ಸಂಪುಟ-5)
(ಲಂಬಕ: ರತ್ನಪ್ರಭಾ)

100

103

ಕಥಾ ಸರಿತ್ಸಾಗರ (ಸಂಪುಟ-6)
(ಲಂಬಕ: ಸೂರ್ಯಪ್ರಭಾ)

100

104

ಕಥಾ ಸರಿತ್ಸಾಗರ (ಸಂಪುಟ-7)
(ಲಂಬಕ: ಅಲಂಕಾರವತೀ)

120

105

ಕಥಾ ಸರಿತ್ಸಾಗರ (ಸಂಪುಟ-8)
(ಲಂಬಕ: ಶಕ್ತಿಯಶೋ)

180

106

ಕಥಾ ಸರಿತ್ಸಾಗರ (ಸಂಪುಟ-9-1)
(ಲಂಬಕ: ವೇಲಾ, ಶಶಾಂಕವತೀ ತರಂಗಗಳು-1-7)

120

107

ಕಥಾ ಸರಿತ್ಸಾಗರ (ಸಂಪುಟ-9-2)
(ಲಂಬಕ: ಶಶಾಂಕವತೀ ತರಂಗಗಳು-8-36)

200

108

ಕಥಾ ಸರಿತ್ಸಾಗರ (ಸಂಪುಟ-10)
(ಲಂಬಕ: ಮದಿರಾವತೀ, ಪಂಚ, ಮಹಾಭಿಷೇಕ ಸುರತಮಂಜರೀ, ಪದ್ಮಾವತೀ, ವಿಷಮಶೀಲ)

300

109

ರವೀಂದ್ರ ಕಥಾ ಮಂಜರಿ (ಭಾಗ-1)

100

110

ರವೀಂದ್ರ ಕಥಾ ಮಂಜರಿ (ಭಾಗ-2)

100

111

ರವೀಂದ್ರ ಕಥಾ ಮಂಜರಿ (ಭಾಗ-3)

100

112

ಚೈನಾ-ಜಪಾನ್ ಪ್ರಸಿದ್ಧ ಕಥೆಗಳು (ಸಂಪಾದಿತ)

50

113

ಲಿಯೊ ಟಾಲ್‌ಸ್ಟಾಯ್ 3 ಕಥೆಗಳು - (ಸಾವು, ಫಾದರ್ ¸ಸರ್ಗಿಯಸ್, ಕ್ರೂಟ್ಸರ್ ಸೋನಾಟಾ)*

80

114

ಹೊಸ ತಲೆಮಾರಿನ ಹಿಂದಿ ಕಥೆಗಳು

70

115

ಅಶೋಕ ಮಿತ್ರನ್ ಕಥೆಗಳು

75

116

ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು - ಧಾರವಾಡಜಿಲ್ಲೆ

45

117

ಗೋರ್ಕಿಯ ಕಥೆಗಳು

25

118

ಕಥಾ ಸಂಸ್ಕೃತಿ-1

100

119

ಕಥಾ ಸಂಸ್ಕೃತಿ-2

100

120

ಕಥಾ ಸಂಸ್ಕೃತಿ-3

100

121

ಮಿ.ಜೆ.ನಿ. ಅವರ ಸಣ್ಣ ಕಥೆಗಳು

50

122

ಸಂಕ್ರಾಂತಿ

60

123

ಉರ್ದುವಿನ ಕಥೆ

60

124

ಈ ಬೆಟ್ಟಗಖೇ ನಮ್ಮ ಮನೆಗಳು

80

125

ವಿಜಯನಗರಚರಿತ್ರೆ*
(ಭಾಗ-1 ಮತ್ತು ಭಾಗ-2)

100

126

ಕುವೆಂಪು ಸಂಚಯ - ಪ್ರಾತಿನಿಧಿಕ ರಚನೆಗಳು

450

127

ಪು.ತಿ.ನ. ಸಂಚಯ - ಪ್ರಾತಿನಿಧಿಕ ರಚನೆಗಳು

250

128

ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಂಚಯ- ಪ್ರಾತಿನಿಧಿಕ ರಚನೆಗಳು

250

129

ಕೂಡಿ ನಡೆವ ಲೇಖನಿ

40

130

ತಿರುಕ್ಕುರಳ್

90

131

ನೈವೇದ್ಯ

40

132

ಗೀತಾಂಜಲಿ *

55

133

ನಾನು ನೆನೆವ ಭವಿಷ್ಯ

30

134

ಮರದ ಎಲೆ ನೀಲಿ

100

135

ಪಾಂಡವ ಪುರ

60

136

ಪುರುಷಾ ಮೃಗ

50

137

ನಿರ್ಮಲಾ

75

138

ಭೂಗರ್ಭಯಾತ್ರೆ

50

139

ಆನಂದ ಮಠ

60

140

ರಾಜಾ ಮಲಯಸಿಂಹ (ಭಾಗ-1)

75

141

ರಾಜಾ ಮಲಯಸಿಂಹ (ಭಾಗ-2)

75

142

ರಾಜಾಮಲಯಸಿಂಹ (ಭಾಗ-3)

75

143

ಯುಗಾಂತ

80

144

ಮಿಲಿಂದ ಪ್ರಶ್ನೆ

30

145

ಮೃತ್ಯುಯೋಗ

80

146

ಹೇಸರಗತ್ತೆಗಳು

120

147

ದಮಯಂತಿ

80

148

ಸೀಜ಼ರ್ ಮತ್ತು ಕ್ಲಿಯೋಪಾತ್ರ

120

149

ಮದಾಂ ಬೊವಾರಿ

25

150

ಹಮ್ಮು-ಬಿಮ್ಮು

100

151

ಅನಾಥ ಪಕ್ಷಿ

85

152

ರಾಬಿನ್‌ಸನ್‌ ಕ್ರೂಸೊಕಥೆ

45

153

ಮೃಗನಯನಿ

115

154

ಪಾತಾಳದಲ್ಲಿ ಪಾಪಚ್ಚಿ

35

155

ಘೊಂತಮಾರ

60

156

ಮಹಾತ್ಮರ ಬರವಿಗಾಗಿ

100

157

ಮಹಾಯಾತ್ರಿಕ

150

158

ಸಾಹೇಬ್, ಬೀಬಿ ಮತ್ತು ಗುಲಾಮ

300

159

ಎರಡು ಧ್ರುವ

80

160

ಇಂದಿರಾಗಾಂಧಿ ಹತ್ಯೆಯ ಬಳಿಕ

90

161

ಯುದ್ಧ ಮತ್ತು ಶಾಂತಿ ಭಾಗ-1

250

162

ಯುದ್ಧ ಮತ್ತು ಶಾಂತಿ ಭಾಗ-2

250

163

ಕಪ್ಪು ಸೂರ್ಯ

60

164

ಎರಡು ಮಹಾಕಾವ್ಯಗಳು

50

165

ಭಾರತದರ್ಶನ ಭಾಗ-1

110

166

ಭಾರತದರ್ಶನ ಭಾಗ-2

110

167

ಪಿಗ್ಮೇಲಿಯನ್

50

168

ಸೋಪೊಕ್ಲೇಸ್ ಮಹಾಕವಿಯ
ಮೂರು ಗ್ರೀಕ್ ನಾಟಕಗಳು (ಒಯ್ದಿಪೌಸ್ ಕೊಲೊನೊಸ್ಸಿನಲ್ಲಿ, ಏಲೆಕ್ತ್ರ, ಫಿಲೊಕ್ತೇತೇಸ್)

80

169

ಷೇಕ್ಸಪಿಯರ್‌ನ ಮೂರು ಮಹಾ ನಾಟಕಗಳು - (ಹ್ಯಾಮ್ಲೆಟ್, ಒಥೆಲೊ, ಮ್ಯಾಕ್ಬೆತ್)

150

170

ಗಾಂಧೀ ಜಯಂತಿ ಮತ್ತು ಮಿನಿಸ್ಟರ್

50

171

ಕಣಿವೆಯ ಹಾಡು

30

172

ಕೌಂಟ್ ಲಿಯೋಟಾಲ್‌ಸ್ಟಾಯ್
ಅವರಆತ್ಮಕಥೆ - (ಶೈಶವ, ಬಾಲ್ಯ, ಯೌವನ)

110

173

ನನ್ನ ಕಥೆ

100

174

ಎವರೆಸ್ಟ್ ವೀರ

120

175

ಬಾಲಗಂಗಾಧರತಿಲಕ್-ಜೀವನಚರಿತ್ರೆ

200

176

ಗಾಂಧೀಜಿ ನಾನು ಕಂಡಂತೆ

40

177

ಲೋಕದೇವ ನೆಹರೂ

60

178

ಮಹಾತ್ಮಾಗಾಂಧಿ ನನ್ನತಾತಾ (ಭಾಗ-1)-ವ್ಯಕ್ತಿತ್ವ ಮತ್ತು ಕುಟುಂಬ

200

179

ಮಹಾತ್ಮಾಗಾಂಧೀ ನನ್ನತಾತಾ (ಭಾಗ-2)-ಸ್ವಾತಂತ್ರ್ಯದ ನೀತಿ ನಿರೂಪಕರು

250

180

ಪ್ರವಾಹಕ್ಕೆ ಎದುರಾಗಿ

150

181

ನನ್ನ ಜನುಮದ ದುರಂತದ ಕಥೆ

60

182

ನ್ಯಾಯಿಕ ಪ್ರಕ್ರಿಯೆಯ ಸ್ವರೂಪ

90

183

ಕಾವೇರಿ ಜಲವಿವಾದಗಳ ನ್ಯಾಯಾಧಿಕರಣ ವರದಿ ಮತ್ತು ತೀರ್ಪು (ಸಂ 1 ರಿಂದ 5)

150

184

ಮಧುಮೇಹ: ದಶವ್ಯಾಧಿಗಳ ಮೂಲ

100

185

ಜೀವಕೋಶಗಳ ಸಂಭ್ರಮಾಚರಣೆ
(ಕ್ಯಾನ್ಸರ್ ಮೇಲಿನ ವಿಜಯ)

60

186

ಇತಿಹಾಸದಲ್ಲಿ ವಿಜ್ಞಾನ ಸಂಪುಟ-1

125

187

ಇತಿಹಾಸದಲ್ಲಿ ವಿಜ್ಞಾನ ಸಂಪುಟ-2

125

188

ಇತಿಹಾಸದಲ್ಲಿ ವಿಜ್ಞಾನ ಸಂಪುಟ-3

125

189

ಇತಿಹಾಸದಲ್ಲಿ ವಿಜ್ಞಾನ ಸಂಪುಟ-4

125

190

ಮಹಿಳೆಯರ ಹದಿಹರೆಯದ ಸಮಸ್ಯೆಗಳು ಸವಾಲುಗಳು ಮತ್ತು ಪರಿಹಾರ

60

191

ಅರವತ್ತರ ಅನಂತರದ ಆರೋಗ್ಯ

60

192

ಶಾಲಾ ಶಿಕ್ಷಣದಲ್ಲಿ ದೇಶಭಾಷೆಗಳು

120

193

ವಾನ್ಯಮಾವ

60

194

BUNTS

800

195

ಮುಂಬಯಿ ಬಿಂಬ

100

196

ಹಿಂದಿ ಪ್ರಬಂಧಗಳು

150

197

ಮಣಿ ಸರ: ಗಡಿದಾಟಿದ ಕವಿತೆಗಳು-2014

120

198

ನಡೆಯೋಣ ಕೇಳುತ್ತಾ

200

199

ಹಿಂದಿ ಏಕಾಂಕ ನಾಟಕಗಳು

125

200

ಕಸಿಮಾವು ಅನುವಾದಿತ ಕಥೆಗಳು-2014

125

201

ಪ್ರತಿಬಿಂಬ ಅನುವಾದಿತ ಲೇಖನಗಳು-2014

75

202

ಉರ್ದುಸಾಹಿತ್ಯ

250

203

ಡಾ.ಬಿ.ಆರ್.ಅಂಬೇಡ್ಕರ್ ಅವರ ಆಯ್ದ ಬರೆಹಗಳು

100

204

ವಿಜಯನಗರ ತುಳುವ ವೀರ ನರಸಿಂಹರಾಯ

150

205

ಸಾಮಾಜಿಕ ಮತ್ತು ಮಾನವಿಕ ಅಧ್ಯಯನಗಳ ಪರಿಭಾಷಾ ಕೋಶ

150

206

ಮರುರೂಪಗಳು

150

207

ಸಮಗ್ರ ಕಾವ್ಯ ಸಂಪುಟ-2

200

208

ಸೂರ್ಯಕಾಂತಿಗಳ ಮಡಿಲಲ್ಲಿ

350

209

ಅನ್ಯ

80

210

ಆವಿಗೆ

400

211

ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣಗಳ ತೀರ್ಪು

100

212

ಕೃಷ್ಣಾ ನದಿ ಜಲ ವಿವಾದಗಳ ನ್ಯಾಯಾಧಿಕರಣಗಳ ವರದಿ

100

213

Indian Languages in School Education System

150

214

ಭಾರತದ ಬಹುಭಾಷಿಕ ಪರಿಸರ ಮತ್ತು ಅನುವಾದ

150

215

ವಿಸ್ಮೃತಿಯ ನಂತರ

160

216

ಡಿಜಿಟಲ್‌ ಕ್ರಾಂತಿ ಮತ್ತು ಭಾರತ

250

217

ನಿಚ್ಚಂ ಪೊಸತು

150

218

ತಾಳೆಗರಿ

125

219

ತೆಂಕಣ ನುಡಿಗಳು ಮತ್ತು ಇಂಗ್ಲಿಷ್

200

220

ಸಂಬಂಧಗಳು

150

221

ಟ್ರ್ಯಾಜಿಡಿ

75

222

ಷೇಕ್‌ಸ್ವಿಯರ್‌ಗೆ ನಮಸ್ಕಾರ

200

223

ಕುವೆಂಪು ಸಂಚಯ ಹಿಂದಿ (ಭಾಗ-1)

200

224

ಕುವೆಂಪು ಸಂಚಯ ಹಿಂದಿ (ಭಾಗ-2)

200

225

ಕುವೆಂಪು ವೈಚಾರಿಕ ಲೇಖನ (ಇಂಗ್ಲಿಷ್)

50

226

ಕುವೆಂಪು ವೈಚಾರಿಕ ಲೇಖನ (ಕೊಂಕಣಿ)

50

227

ಕುವೆಂಪು ವೈಚಾರಿಕ ಲೇಖನ (ತೆಲಗು)

50

228

ಕುವೆಂಪು ವೈಚಾರಿಕ ಲೇಖನ (ಮಲೆಯಾಳಂ)

50

229

ಕುವೆಂಪು ವೈಚಾರಿಕ ಲೇಖನ (ಉರ್ದು)

50

230

ಕುವೆಂಪು ವೈಚಾರಿಕ ಲೇಖನ (ಅಸ್ಸಾಮಿ)

50

231

ಕುವೆಂಪು ವೈಚಾರಿಕ ಲೇಖನ (ತಮಿಳು)

50

232

ಕುವೆಂಪು ವೈಚಾರಿಕ ಲೇಖನ (ಬಂಗಾಳಿ)

50

233

ಕುವೆಂಪು ವೈಚಾರಿಕ ಲೇಖನ (ಒಡಿಯಾ)

50

234

ಕುವೆಂಪು ವೈಚಾರಿಕ ಲೇಖನ (ಹಿಂದಿ)

50

235

ಕುವೆಂಪು ವೈಚಾರಿಕ ಲೇಖನ (ಮರಾಠಿ)

50

236

ಕುವೆಂಪು ವೈಚಾರಿಕ ಲೇಖನ (ಗುಜರಾತಿ)

50

237

Kuvempu Reader

150

238

Collected Short Stories of Kuvempu

250

239

ಗಾಳಿಹರಕೆಯ ಹಾಡು
ಅನುವಾದಿತ ಕವಿತೆಗಳು-2015

100

240

ಘನವು ಎಂಬುದು
ಅನುವಾದಿತ ಕಥೆಗಳು-2015

200

241

ಕಂಗಳಿಗೆ ನಿದ್ದೆ ಬಾರದು
ಅನುವಾದಿತ ಲೇಖನಗಳು-2015

75

242

ಯುಗದ ಹೆಜ್ಜೆ

150

243

ಡಯಾಸ್ಫೋರಾ

75

244

ಮಹಿಳಾ ಸಶಕ್ತೀಕರಣ : ಒಂದು ಪರಿಕಲ್ಪನೆ

75

245

ಕುವೆಂಪು ಸಂಚಯಂ (ತೆಲಗು)

150

246

ಕುವೆಂಪು ಸಂಚಯಂ (ಮಲೆಯಾಲಂ)

150

247

ಕುವೆಂಪು ವಾಸಿಪ್ಪು(ತಮಿಳು)

150

248

ತೆಂಕಣ ನುಡಿಗಳಲ್ಲಿ ಸ್ತ್ರೀವಾದಿ ಸಂಕಥನ

150

249

ಭಾರತದಲ್ಲಿ ವಿಜ್ಞಾನ

400

250

ಸ್ವೇಚ್ಛೆ

100

251

ಫಕೀರಾ

150

252

ಆಚಾರ್ಯ ನರೇಂದ್ರ ದೇವ ಅವರ ಸಮಾಜವಾದಿ ವಿಚಾರಧಾರೆ

125

253

ಈನಿಯಡ್

150

254

ಗಿರಮಿಟಿಯ

450

255

ಯೂಲಿಸಿಸ್ಸನ ಸಾಹಸಗಳು

60

256

ಟ್ರೋಜನ್ ಯುದ್ಧ

60

257

ಡಾನ್ ಕಿಕ್ಸಾಟನ ಸಾಹಸಗಳು

60

258

ರೆಕ್ಕೆಯೊಡೆದ ಮುಗಿಲು

100

259

ಬಂಡವಾಳ ಯುಗ

150

260

ಸಾಮ್ರಾಜ್ಯಗಳ ಯುಗ

100

261

ಕ್ರಾಂತಿಯ ಯುಗ

100

262

ಮಿಡತೆಗಳಿಗೆ ಕಿವಿಯೊಡ್ಡಿ

160

263

ಅನ್ನಾ ಕರೆನಿನ

100

264

ಕುವೆಂಪು ಬರೆಹಗಳ ಓದಿನ ರಾಜಕಾರಣ

150

265

ಕುವೆಂಪು ನಾಟಕಗಳು ಮುಂದಿಡುವ ರಂಗಕಲ್ಪನೆ

40

266

ಮರಾಠಿ ವೈಚಾರಿಕ ಲೇಖನಗಳು

60

267

ಬುರ್ಖಾದ ಹುಡುಗಿ

60

268

ಯಾರದೀ ಕಾಡು

150

269

ಅಭಯ

120

270

ಮುಜ್ರಿಮ್ ಹಾಜಿರ್

400

271

ಫೀಲ್ಡ್ಮಾರ್ಷಲ್ಕಾರ್ಯಪ್ಪ

500

272

ಕುವೆಂಪು ವೈಚಾರಿಕ ಲೇಖನ (ಪಂಜಾಬಿ)

50

273

ಶಿವರಾಮ ಕಾರಂತರ ವೈಚಾರಿಕ ಲೇಖನಗಳು (ಮಲೆಯಾಲಂ)

50

274

ಪೆರಿಯಾರ್ ಅವರ ವಿಚಾರಗಳು

100

275

ಶೇಕ್ಸಪಿಯರ್ ಸ್ಪಂದನ

150

276

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳು

50

277

ವಿಚಾರ ಕಥನ ಸಂಪುಟ-1

200

278

ವಿಚಾರ ಕಥನ ಸಂಪುಟ-2

250

279

ಅಭಿವೃದ್ಧಿ

75

280

ಕನ್ನಡ ಮರಾಠಿ ನಂಟು: ಮುನ್ನೋಟ

40

281

ಮಹಿಳಾ ಅಧ್ಯಯನ ಪರಿಭಾಷೆ

75

282

ಮೋಡಿ ಲಿಪಿಯ ಚಾರಿತ್ರಿಕ ಮಹತ್ವ

40

283

ಅನುವಾದ ಸಂಕಥನ -1

200

284

ಅನುವಾದ ಸಂಕಥನ -2

200

285

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 01

150

286

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 02

150

287

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 03

150

288

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 04

150

289

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 05

150

290

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 06

150

291

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 07

150

292

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 08

150

293

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 09

150

294

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 10

150

295

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 11

150

296

ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಗಳು- 12

150

297

ಕನ್ನಡ ನುಡಿಯ ಆಕರ ಕೋಶ

300

298

ಕಡಲ ಕರೆ

50

299

ಮಿಶೆಲ್ ಫುಕೋ

80

300

ಲ್ಯಾಟಿನ್ ಕಾನೂನು ಸೂತ್ರಗಳು ಮತ್ತು ಪದಗಳ ನಿಘಂಟು

150

301

ಶಾರದ

100

302

HER POEMS

80

303

ಎಮ್ಮಾ

60

304

ಕಗ್ಗತ್ತಲ ಹೃದಯ

70

305

ರೂಪರೂಪಗಳನು ದಾಟಿ

40

306

ಇಂದ್ರಸಭಾ

50

307

ಜಗವೇ ಮಾಯಾ

50

308

ರಾಜಕುಮಾರ ಕೆಂಗ್ದು

50

309

ಯುಗಾಂತ

125

310

ಕೊನೆಯ ಉತ್ತರ

60

311

ತೊಲ್ ಗಾಪ್ಪಿಯಂ

350

312

ಮಲಯಾಳಂ ವೈಚಾರಿಕ ಬರೆಹಗಳು

120

313

INDIRABAI

400

314

ಸದಾಮಲ್ಲಿಗೆ

200

315

Multilingualism in India and Translation

150

316

ಕನ್ನಡ ವಿವೇಚನಾತ್ಮಕ ವ್ಯಾಸಾಲು

90

317

ತೆಲುಗು ವೈಚಾರಿಕ ಬರೆಹಗಳು

120

318

ನಾಮದೇವ ಡಸಾಳ ವಾಚಿಕ

80

319

ಜಾಗತಿಕ ವಿಚಾರ ಸಾಹಿತ್ಯ

250

320

ಭಾರತೀಯ ವಿಚಾರ ಸಾಹಿತ್ಯ

320

321

ಸಮಾಜವಾದ ಒಂದು ವಾಚಿಕೆ

100

322

ಗುರುಜಾಡರ ವಾಚಿಕೆ

80

323

ನುಡಿಗಳ ಅಳಿವು

250

324

ಭೂಗರ್ಭೀಚ ಜಲಪ್ರವಾಹ

225

325

ಭಾರತೀಯ ಭಾಷೆಗಳಲ್ಲಿ ಮಹಿಳಾ ಸಾಹಿತ್ಯ

250

326

ಕಂಬರಾಮಾಯಣ

250

327

ವಿರಾಟ್ ದರ್ಶನ

100

328

ಅತಂತ್ರ ಜೂಡ್

60

329

ಬೌದ್ಧಧರ್ಮದ ದರ್ಶನ

400

330

ಚುಂಬಕಗಾಳಿ

170

331

ಗ್ರೇಟ್ ಗ್ಯಾಟ್ಸ್ ಬಿ

60

332

ವುದರಿಂಗ್ ಹೈಟ್ಸ್

50

333

ಭಾರತೀಯ ಭಾಷೆಗಳ ನಾಟಕಸಂಪುಟ-1

250

334

ದಾಮೋದರ ಮಾವಜೊ ವಾಚಿಕೆ

160

 

1128ರಲ್ಲಿ ಕ್ರೈಂ 27

60

336

ಟ್ರೈನ್ ಟು ಪಾಕಿಸ್ತಾನ್

60

337

ನಾಥರಿದ್ದೂ ಅನಾಥೆ

50

338

ಅತಿರೇಕಗಳ ಯುಗ

200

339

ಕಾಂಜಿ ಪಟೇಲ್ ವಾಚಿಕೆ

90

340

ಆಫ್ರಿಕನ್ ಸಾಹಿತ್ಯ ವಾಚಿಕೆ

300

341

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-1

400

342

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-2

400

343

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-3

400

344

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-4

400

345

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-5

400

346

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-6

400

347

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-7

400

348

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-8

400

349

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-9

400

350

ಭಾರತದ ಸಂವಿಧಾನ ರಚನಾಸಭೆಯ ಚರ್ಚೆಗಳು (ನಡೆವಳಿಗಳು) ಸಂಪುಟ-10

400

351

ಭಾರತೀಯ ಭಾಷೆಗಳ ನಾಟಕಸಂಪುಟ-2

250

352

ಭಾರತೀಯ ಭಾಷೆಗಳ ನಾಟಕಸಂಪುಟ-3

150

353

ಕಾಡಬೆಳಕು

50

354

ಔರಂಗ ಜೇಬ್

60

355

ಸರಹುಲ್

150

356

ಅಂತರಂಗ-ಬಹಿರಂಗ

150

357

ಕುವೆಂಪು ಓದು

150

358

ಅಧೋಲೋಕದ ಟಿಪ್ಪಣಿಗಳು

80

359

ಡೆವಿಲ್ ಆನ್ ದ ಕ್ರಾಸ್

120

360

ರಾಜರ್ಷಿ ಶಾಹು ಛತ್ರಪತಿ

400

361

ಡಿಕೆಮರಾನ್

150

362

ಹಿಂದ್ ಸ್ವರಾಜ್

250

363

ಅಸ್ಪೃಶ್ಯ

80

364

ಕೆಂಡಗಳು

60

365

ಸಾವಿತ್ರಿ

75

366

ಕಾಡುಹುವ್ವು

75

367

ಒಂದು ಮುರುಕು ಕುರ್ಚಿ

35

368

ಆನಂದ

75

369

ಪಾಲ್ ಸಕರಿಯಾ ವಾಚಿಕೆ

175

370

ಮಹಾಶ್ವೇತಾದೇವಿ ಅವರ ಕಥಾಸಾಹಿತ್ಯ

250

371

ಪಿಯರ್ ಬೊರ್ದು ವಿಚಾರಗಳು

75

372

ಪೂರ್ಣಚಂದ್ರ ತೇಜಸ್ವಿ ವಾಚಿಕೆ

200

373

ಆಫ್ರಿಕನ್ ಕಥೆಗಳು

150

374

ಪಂಜೆ ಮಂಗೇಶರಾಯರ ವಾಚಿಕೆ

200

375

ಚರಿತ್ರೆ ಎಂದರೇನು

100

376

ಝಾರ್ಖಂಡ್ ಆದಿವಾಸಿಗಳ ಬದುಕು

150

377

ಕೇಳುತ್ತಾ ನಡೆಯೋಣ

300

378

ಸಂಸ್ಕೃತಿ-ಸಂಚಯ

150

379

ಮಲಯಾಳಂಕತೆಗಳು

100

380

LANKESH READER

150

381

ಸಮಕಾಲೀನ ಲೋಹಿಯಾ

200

382

ಚದುರಂಗ ವಾಚಿಕೆ

200

383

ಇಲಿಯಡ್

80

384

ಬಿಳಿಕೊಕ್ಕರೆ ಮತ್ತು ವಿಶ್ವದ ಆಖ್ಯಾಯಿಕೆಗಳು

150

385

ಪ್ರಾಕೃತ-ಕನ್ನಡ ಬೃಹತ್ ನಿಘಂಟು

500

386

ಮಹಾತ್ಮ ಜ್ಯೋತಿರಾವ ಫುಲೆ

250

387

ಕಥಾಕಣಜ

150

388

ಕಡಕೋಳ ಮಡಿವಾಳಪ್ಪ ಮತ್ತು ಇತರ ತತ್ವಪದಕಾರರ ವಾಚಿಕೆ

150

389

ಶಂಕರಾನಂದಯೋಗಿ ಮತ್ತು ಇತರ ತತ್ವಪದಕಾರರ ವಾಚಿಕೆ

150

390

ಕೈವಾರ ತಾತಯ್ಯನ ಪರಂಪರೆಯ ತತ್ವಪದಕಾರರ ವಾಚಿಕೆ

200

391

ಕನ್ನಡ ತತ್ವಪದಕಾರ್ತಿಯರ ವಾಚಿಕೆ

250

392

ಅನುವಾದ ಕಾವ್ಯ ಓದಿನ ಸುಖ

150

393

ಭಾರತೀಯ ತತ್ವಶಾಸ್ತ್ರದಲ್ಲಿ ಕಾಳು ಮತ್ತು ಜೊಳ್ಳು

250

394

ಸಂತ ಚಳುವಳಿ

150

395

ರೆಡ್ ಮೆಡಿಸನ್

100

396

ಸಾಪೇಕ್ಷತೆ ಎಂದರೇನು

50

397

ಸಾಮಾಜಿಕ ಕೆಡುಕುಗಳು ಮತ್ತು ವೈಜ್ಞಾನಿಕ ಪರಿಹಾರ

100

398

ಮಾತು ಸಾಯುವ ಮಾತು

150

399

ಸಮಕಾಲೀನ ಗಾಂಧೀಜಿ

200

400

ಸಂಸ್ಕೃತದ ನಾಟಕಗಳ ಕನ್ನಡ ಅನುವಾದ ಸಂಪುಟ-1

250

401

ಸಂಸ್ಕೃತದ ನಾಟಕಗಳ ಕನ್ನಡ ಅನುವಾದ ಸಂಪುಟ-2

250

402

ಇರಾವತಿ ಕರ್ವೆ

75

403

ಎಂ.ಹಿರಿಯಣ್ಣ

75

404

ಕೊಂಕಣಿ ಕಥಾಕಣಜ

100

405

ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-1 ಸಣ್ಣಕಥೆ

200

406

ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-2 ಸಾಹಿತ್ಯ ವಿಮರ್ಶೆ

200

407

ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-3 ಕಾವ್ಯ

100

408

ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-4 ನಾಟಕ

150

409

ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ-5 ಆತ್ಮಕಥೆ

200

410

ಕುಮಾರವ್ಯಾಸ ಸಾಹಿತ್ಯ ವಾಚಿಕೆ

250

411

ನಾಮವರ್ ಸಿಂಹ್ ಅವರ ಆಯ್ದ ಲೇಖನಗಳು

100

412

ರವೀಂದ್ರನಾಥ ಟಾಗೋರರ ಆಯ್ದ ಬರಹಗಳು

50

413

ಬಿಮಲ್ ಕೃಷ್ಟ ಮತಿಲಾಲರ ಆಯ್ದ ಬರೆಹಗಳು

75

414

ಡಿ.ಡಿ.ಕೊಸಾಂಬಿಯವರ ಆಯ್ದ ಬರೆಹಗಳು

80

415

ಅಂತ್ಯವಿಲ್ಲದ ಹಾದಿ (ಅನುವಾದಿತ ವೈಚಾರಿಕ ಲೇಖನಗಳು-2018)

100

416

ನಿರ್ಮಲ್ ವರ್ಮಾ ಅವರ ಆಯ್ದ ಬರಹಗಳು

50

417

ದೇವಿಪ್ರಸಾದ್ ಚಟ್ಟೋಪಾಧ್ಯಾಯ ವಾಚಿಕೆ

200

418

ದಕ್ಷಿಣ ಭಾರತದ ಜಾತಿ ಮತ್ತು ಬುಡಕಟ್ಟುಗಳು

1500

419

ಶಿವರಾಮ ಕಾರಂತ ವಾಚಿಕೆ

300

420

A Probe Into Kurukshetra

110

421

ಆಟವಾಡೋಣ ಬಾ..!

140

422

ಭಾವಬಂಧನ

80

423

ಕಲ್ಲಪ್ಪ ಢಾಲೆ ದಿನಚರಿ

50

424

ಕವಿಸಾರ್ವಭೌಮ

150

425

ಭಾಸ ಮಹಾಕವಿ

350

426

ಎಪಿಕ್ವೆಟಸ್

400

427

ಕಾಳಿದಾಸ

 

428

ಕನ್ನಡ ವಕ್ರೋಕ್ತಿ ಜೀವಿತ

400

429

ಮಂಕುತಿಮ್ಮಾಚೆ ಕಾವ್ಯೆಂ

150

430

ಮೈಸೂರು ಕೆನರಾ ಮತ್ತು ಮಲಬಾರ್

430

431

ಪರ್ಷಿಯಾದ ಪ್ರತಿಭೆಗೆ ಕನ್ನಡ ಕಂಪು ಉಮರನ ಒಸಗೆ

100

432

ರಾಜತರಂಗಿಣಿ

350

433

ಸಮಾಜವಾದ ಮತ್ತು ಬಂಡವಾಳ ಕುರಿತು ಜಾಣೆಮಹಿಳೆಗೆ ಕೈಪಿಡಿ

400

434

Sankethi

280

435

ಶಕ್ತಿವಿಶಿಷ್ಟಾದ್ವೈತ ತತ್ವ್ತತ್ರಯ ವಿಮರ್ಶೆ

350

436

ಶ್ರೀಕೃಷ್ಣ ಕರುಣಾಮೃತ

 

437

ಶ್ರೀ ಕೃಷ್ಣ ಚರಿತೆ

260

438

ಸಿರಿಗನ್ನಡ ಗೀತಾಂಜಲಿ

70

439

Sri Ramshvamedham

150

440

ಸ್ವರ್ಗಚ್ಯುತಿ

500

441

ಶ್ಯಾಮಪ್ರಸಾದ್ ಮುಖರ್ಜಿ ಸಮಗ್ರ ಜೀವನ ಚರಿತ್ರೆ

350

442

ವಯಾಂ ರಕ್ಷಾಮಃ

240

443

ಮಂಕುತಿಮ್ಮನಿ ಮಿನಕು

250

444

ಕರಮಜೋನ್ ಸಹೋದರರು

700

445

ಪುರಾತನ ಗ್ರೀಕ್, ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಲೇಖಕರು ಕಂಡ ಬ್ರಾಹ್ಮಣರು

220

446

ಸಪ್ನಸಾರಸ್ವತ

400

447

ಉಪನಿಷತ್ತುಗಳ ಮೇಲೆ ಬೆಳಕು

150

448

ಖುದಿರಾಮ್ ಬೋಸ್

80

449

ನನ್ನ ಚಹಾ ತೋಟ ಮತ್ತು ನೀಲಿ ಹಕ್ಕಿ

50

450

ಪರ್ಯಾವರಣವೋ ಪರ್ಯಾಮರಣವೋ

120

451

ಅಸೈನ್ ಮೆಂಟ್ ಜಾಫ್ನಾ

140

452

Saints and Poets

70

453

ಗೌಡ ಕನ್ನಡ

 

454

ಚಂಡಮಾರುತ

350

455

ಪಾಶ್ಚ್ಯಾತ್ಯ ತತ್ತ್ವಜ್ಞಾನದ ಇತಿಹಾಸ

500

456

1857 ಸ್ವಾತಂತ್ರ್ಯ ಸಮರದಲ್ಲಿ ದಕ್ಷಿಣ ಬಾರತ

300

457

ಇನ್ನೊಂದು ತುಂಬುಗಣ್ಣಿನ ನಗು

400

458

ರಾಜನಿಲ್ಲದ ರಾಜ್ಯ

210

459

ಸ್ವದೇಶಿ ಸಮಾಜ್

90

460

ಕರಾಡ ಕನ್ನಡ ಪದಕೋಶ

90

461

ಭಾರತದ ನ್ಯಾಯಿಕ ಮತ್ತು ಸಾಂವಿಧಾನಾತ್ಮಕ ಇತಿಹಾಸ

 

462

ಗ್ರೇಟ್ ಮೈಂಡ್ಸ್ ಆನ್ ಇಂಡಿಯಾ

 

463

ಭಾರತದಲ್ಲಿ ಭಯೋತ್ಪಾದನೆಯ ಮುಖಗಳು

200

464

ಅಪ್ಪಳಿಸುವ ಕಲ್ಲುಗಳು

200

465

ಪ್ರಾಚ್ಯ ಮತ್ತು ಪ್ರಾ ಕೆಲವು ಅಧ್ಯಯನಗಳೂ

 

466

ಶಿವಾದ್ವೈತ ಪರಿಭಾಷ

100

467

ಕಾನ್ ಪುರ ಟು ಕಾಲಾಪಾನಿ

200

468

ಭಾಷಾಂತರ ಅಧ್ಯಯನ ಒಂದು ಕೈಪಿಡಿ

200

469

ರಾಜಾವಳಿ

140

470

ವರ್ಷ ವಿಲಾಸ

170

471

ಪರಮ ರಹಸ್ಯ

40

472

ವಿರೂಪಾಕ್ಷ ಪಂಚಶಿಕಾ

60

473

ಮುಕುಟಾಗಮ

 

474

ಕಾರಣಾಗಮ

150

475

ಚಂದ್ರ ಜ್ಞಾನಾಗಮ

200

476

ವರ್ಸಲ್ ಮತ್ತು ಇತರ ಕಥೆಗಳು

 

477

ಮಿಷನರಿ ಪ್ರವಾಸ 1840 ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ

150

478

ಕಿಟ್ಟೆಲ್ ವಾಚಿಕೆ

200

479

ಛಂದೋಗತಿ

130

480

ಚಾತುರ್ಣ್ಯ ಭಾರತಿ ಸಮೀಕ್ಷೆ

400

481

ಭಾರತದ ಸಮರ ಚರಿತ್ರೆ

150

482

ಶಕುಂತಲೋಪಾಖ್ಯಾನ

80

483

ರಘುಕುಲ ಚರಿತಂ

220

484

ಬ್ಯಾರಿ ಗಾದೆಕೋಶ - ಕನ್ನಡ ಕೋಶ

80

485

ಭವಭೂತಿ

350

486

ಹರಿಕಥಾಮೃತ ಸಾರ

350

487

ಚೋಮನ ದುಡಿ ಕೊರಗ ಭಾಷೆಗೆ

80

488

ಅಪ್ಪಯ್ಯನ ಆಸ್ತಿಕತೆ

500

489

ಎದ್ದೇಳು ಹಿಂದೂಸ್ಥಾನ

150

490

ದೊಡ್ಡಜಾಲು ಮತ್ತು ಬದ್ಧ

80

491

ಅನಿಮಲ್ ಫಾರ್ಮ

80

492

ಕನ್ನಡ ಕ್ರಿಯಾಸಾರ

220

493

ಈಶಾವಾಸ್ಯ ಉಪನಿಷತ್ ವ್ಯಾಖ್ಯೆ ಕೃತಿ

 

494

ಮುಂಡಕೋಪನಿಷತ್ ಭಾಷ್ಯಚಂದ್ರಿಕೆ

60

495

ರಾಮಚರಿತ ಮಾನಸ 1 -10

4000

496

ಬಿರ್ಯಾನಿ ಮತ್ತು ಇತರ ಕಥೆಗಳು

120

497

ಶಕುಂತಕಾ

150

498

2020ರ ಅನುವಾದಿತ ಕತೆಗಳು

100

499

ಭಾರತದ ಆರ್ಥಿಕ ಇತಿಹಾಸ ಭಾಗ-1

400

500

ಭಾರತದ ಆರ್ಥಿಕ ಇತಿಹಾಸ ಭಾಗ-2

500

501

ಕೊಡವ ಜಯಾಭಾರತ ಮಹಾಭಾರತ ಕಾವ್ಯ

550

502

"ಅರಕ ಜಬ್ಬೆ" ಮತ್ತು ಕುದ್ಕನ ಕತೆಗಳು

100

503

ಮಹಾಭಾರತ ಕಥಾಸಾರ

500

504

ಹಿಂದೂ ಪಾಲಿಟಿ

200

505

ಉಳಿವಿನ ತಂತ್ರಗಳು

150

506

ಕೋಟಿ ಚೆನ್ನಯ

80

507

ಭಾಷೆ ಮತ್ತು ಭಾಷಾ ಬೋಧನೆಯ ವಾಚಿಕೆ-1
ನುಡಿಕಲಿಸುವ ನೂರು ದಾರಿ ಸಂಪುಟ -1

150

508

ಭಾಷೆ ಮತ್ತು ಭಾಷಾ ಬೋಧನೆಯ ವಾಚಿಕೆ-2
ನುಡಿಕಲಿಸುವ ನೂರು ದಾರಿ ಸಂಪುಟ -2

150

509

Selected Ragale's Harihara

120

 

XII.       ಪ್ರಾಧಿಕಾರಕ್ಕೆ ಹಂಚಿಕೆ ಮಾಡಲಾದ ಮೊಬಲಗನ್ನೊಳಗೊಂಡು, ಸಹಾಯಧನ ಕಾರ್ಯಕ್ರಮಗಳ ಜಾರಿಯ

ವಿಧಾವನ್ನು ಮತ್ತು ಅಂತಹ ಕಾರ್ಯಕ್ರಮಗಳ ಫಲಾನುಭವಿಗಳ ವಿವರಗಳು :

 

ಪ್ರಾಧಿಕಾರದಲ್ಲಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿರುವುದಿಲ್ಲ.

 

XIII.      ಪ್ರಾಧಿಕಾರ ನೀಡಿರುವ ರಿಯಾಯಿತಿಗಳನ್ನು, ಅನುಮತಿ ಪತ್ರಗಳನ್ನು ಅಥವಾ ಅಧಿಕಾರ ಪತ್ರಗಳನ್ನು ಪಡೆಯುವವರ ವಿವರಗಳು:

 

ಪ್ರಾಧಿಕಾರ ಹೊರತಂದಿರುವ ಪ್ರಕಟಣೆಗಳಿಗೆ ಜನವರಿ, ಏಪ್ರೀಲ್, ಆಗಷ್ಟ ಹಾಗೂ ನವೆಂಬರ್ ತಿಂಗಳಲ್ಲಿ ಶೇ:50% ಹಾಗು ಉಳಿದ ತಿಂಗಳಲ್ಲಿ ಸರ್ಕಾರ ನಿಗದಿಪಡಿಸಿರುವ ರಿಯಾಯಿತಿಗಳನ್ನು ಕೆಳಕಂಡಂತೆ ನೀಡಲಾಗುತ್ತದೆ.

 

ಕ್ರ.ಸಂ

ಪುಸ್ತಕದ ಮುದ್ರಣ ಅವಧಿ

ಸಾರ್ವಜನಿಕರಿಗೆ ರಿಯಾಯಿತಿ

ಪುಸ್ತಕ ಮಾರಾಟಗಾರರಿಗೆ

ರಿಯಾಯಿತಿ

1

10 ವರ್ಷ ಮೇಲ್ಪಟ್ಟ ಅವಧಿಯ ಪುಸ್ತಕಗಳು

50%

55%

2

6 ವರ್ಷದಿಂದ 10 ವರ್ಷದ ಅವಧಿಯ ಪುಸ್ತಕಗಳು

30%

40%

3

3 ರಿಂದ 5 ವರ್ಷಗಳ ಅವಧಿಯ ಪುಸ್ತಕಗಳು

20%

25%

4

ಹೊಸ ಪ್ರಕಟಣೆಗಳು

2 ವರ್ಷದ ಅವಧಿವರೆಗೆ

15%

25%

                                                                                                                       

XIV.      ಪ್ರಾಧಿಕಾರದ ಬಳಿ ಇರುವ ಅಥವಾ ಅದು ಹೊಂದಿರುವ ವಿದ್ಯುನ್ಮಾನ ರೂಪಕ್ಕೆ ಪರಿವರ್ತಿಸಿರುವ ಮಾಹಿತಿಗೆ ಸಂಬಂಧಿಸಿದಂತೆ ವಿವರಗಳು :

 

ಪ್ರಾಧಿಕಾರದ e-Mail ವಿಳಾಸ: kbbp-bengaluru@ka.gov.in ಮತ್ತು ಫ್ಯಾಕ್ಸ್‌ ಸಂಖ್ಯೆ : 080-23183311. 

 

 1. ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯವನ್ನು ಅಥವಾ ವಾಚನಾಲಯವನ್ನು ನಿರ್ವಹಿಸುತ್ತಿದ್ದಲ್ಲಿ ಅದರ ಕರ್ತವ್ಯ ವೇಳಾ ಮಾಹಿತಿ ಪಡೆಯಲು ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು :

 

ಪ್ರಾಧಿಕಾರವು ಒಂದು ಚಿಕ್ಕ ಗ್ರಂಥಾಲಯವನ್ನು ಹೊಂದಿದೆ. ಕಚೇರಿ ವೇಳೆಯಲ್ಲಿ ಅಧಿಕಾರಿ ಅಥವಾ ಸಿಬ್ಬಂದಿಯವರ ನೆರವು ಪಡೆದು ಸೌಲಭ್ಯವನ್ನು ಪಡೆದುಕೊಳ್ಳಬಹುದು.

 

XVI.      ಸಾರ್ವಜನಿಕ ಮಾಹಿತಿ ಅಧಿಕಾರಿ ಹೆಸರುಗಳು, ಪದನಾಮಗಳು ಮತ್ತು ಇತರ ವಿವರಗಳು

 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿ ವಿವರ :

 

ಕ್ರ.ಸಂ

ಸಾರ್ವಜನಿಕ ಮಾಹಿತಿ ಅಧಿಕಾರಿ

ಮೇಲ್ಮನವಿ ಪ್ರಾಧಿಕಾರ

1.

ಶ್ರೀ.ಈಶ್ವರ್.ಕು.ಮಿರ್ಜಿ

ರಿಜಿಸ್ಟಾರ್

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ

ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾಲಯ ಹಿಂಭಾಗ, ಜ್ಞಾನ ಭಾರತಿ ಆವರಣ, ಮಲ್ಲತ್ತಹಳ್ಳಿ

ಬೆಂಗಳೂರು-560056

ದೂ: 080-23183311 / 12

ಶ್ರೀ.ಬಲವಂತರಾವ್ ಪಾಟೀಲ್

ಜಂಟಿ ನಿರ್ದೇಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಭವನ, ಜೆ.ಸಿ.ರಸ್ತೆ

ಬೆಂಗಳೂರು-560002

ದೂ :080-22213530

 

ಇತ್ತೀಚಿನ ನವೀಕರಣ​ : 31-01-2023 04:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕುವೆಂಪು ಭಾಷಾಭಾರತಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080