ಅಭಿಪ್ರಾಯ / ಸಲಹೆಗಳು

ಕಾರ್ಯಚಟುವಟಿಕೆಗಳು

 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಸ್ವರೂಪ ಮೂರು ಮುಖದ್ದಾಗಿರುತ್ತದೆ :

(ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು

(ಆ) ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು

(ಇ) ಪ್ರಕಟಣೆಗಳು

(ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು :

(1)       “ಕನ್ನಡ ಸಾಹಿತ್ಯ ಹಿರಿಮೆ-ಗರಿಮೆಗಳಲ್ಲಿ ಯಾವ ಭಾರತೀಯ ಸಾಹಿತ್ಯಕ್ಕೂ ಕಡಿಮೆಯಾಗಿಲ್ಲ.  ಅದರ ಮಹತ್ವವನ್ನು ಎತ್ತಿತೋರಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಅಷ್ಟೇ” ಎಂಬುದಾಗಿ ಕುವೆಂಪು ಅವರು ಉದ್ಘೋಷಿಸಿದ್ದರು.  ಈ ಹಿನ್ನೆಲೆಯಲ್ಲಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ಅನುವಾದ, ತೌಲನಿಕ ಸಾಹಿತ್ಯ, ವಿದೇಶಿ ಭಾಷೆಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಈ ಕೆಳಕಂಡ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಶಿಕ್ಷಣಗಳನ್ನು ಆರಂಭಿಸಲು ಈಗಾಗಲೇ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಪಡೆಯಲಾಗಿದೆ.

 • ಭಾಷಾಂತರ ಡಿಪ್ಲೊಮಾ ಶಿಕ್ಷಣ - ಮೊದಲ ಹಂತದಲ್ಲಿ ಇಂಗ್ಲಿಷ್, ಹಿಂದೀ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಮರಾಠಿ ಭಾಷೆಗಳಲ್ಲಿ ವಿಶೇಷ ತರಬೇತಿಗೆ ಒತ್ತುಕೊಟ್ಟು ಈ ಶಿಕ್ಷಣವನ್ನು ಪ್ರಾರಂಭಿಸಲಾಗುತ್ತದೆ.
 • ಭಾಷಾಂತರದಲ್ಲಿ ಎಂ.ಫಿಲ್ ಶಿಕ್ಷಣ : ವಿಶೇಷ ವಿಷಯಕ್ಕೆ ಒತ್ತುಕೊಟ್ಟು
 • ಪತ್ರಿಕೋದ್ಯಮ ಮತ್ತು ಭಾಷಾಂತರ
 • ಕಾನೂನುಶಾಸ್ತ್ರ, ಆಡಳಿತ ಭಾಷೆ ಮತ್ತು ಭಾಷಾಂತರ
 • ವಿಜ್ಞಾನ ಮತ್ತು ಮಾನವಿಕಶಾಸ್ತ್ರ ಕೃತಿಗಳು ಮತ್ತು ಭಾಷಾಂತರ ; ಮತ್ತು
 • ತೌಲನಿಕ ಸಾಹಿತ್ಯ
 • ವಿದೇಶೀ ಭಾಷೆಗಳ ಶಿಕ್ಷಣ (ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ)

 (2)       ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಮಟ್ಟದಲ್ಲಿ ಪ್ರಚುರಪಡಿಸಬೇಕಾದರೆ ಜಾಗತಿಕ ಪ್ರಾಚುರ್ಯದ ವಿದೇಶಿ ಭಾಷೆಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಮೊದಲ ಹಂತದಲ್ಲಿ ಸ್ಪ್ಯಾನಿಷ್, ಜಪಾನಿ, ಫ್ರೆಂಚ್, ರಷ್ಯನ್, ಜರ್ಮನ್, ಚೀಣೀ, ಆಫ್ರಿಕನ್ ಭಾಷೆಗಳು-ಈ ಎಲ್ಲ ಶಿಕ್ಷಣಗಳಿಗೆ ಸಂಬಂಧಿಸಿದಂತೆ, ತಜ್ಞರೊಂದಿಗೆ ಸಮಾಲೋಚಿಸಿ, ಸಮಿತಿಗಳನ್ನು ರಚಿಸಿ ಕೊಂಡು ವಿವಿಧ ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿರುವಂಥ ತರುಣ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ತರಬೇತಿ ನೀಡಿ ಪ್ರಕಟಣಾವಕಾಶಗಳನ್ನು ಕಲ್ಪಿಸಿಕೊಡಲು ಅನುಕೂಲವಾಗುವಂತೆ ವಿಚಾರಗೋಷ್ಠಿಗಳು, ವಿಚಾರಸಂಕಿರಣಗಳು, ಕಾರ್ಯಶಿಬಿರಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುತ್ತದೆ.

 (ಆ) ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು :

ಭಾರತೀಯ ಜ್ಞಾನಪೀಠ ಮತ್ತು ಇತರ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿರುವ ಶ್ರೇಷ್ಠ ಸಾಹಿತಿಗಳ ಪ್ರಾತಿನಿಧಿಕ ರಚನೆಗಳ ಸಂಚಯಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ಹೊರತರಲು ಉದ್ದೇಶಿಸಿದ್ದು, ಈಗಾಗಲೇ ‘ಕುವೆಂಪು ಸಂಚಯ’ ಮತ್ತು ‘ಪು.ತಿ.ನ ಸಂಚಯ’ಗಳನ್ನು ಹೊರತರಲಾಗಿದ್ದು, ಇವುಗಳ ಇಂಗ್ಲಿಷ್ ಮತ್ತು ಹಿಂದೀ ಆವೃತ್ತಿಗಳನ್ನು ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಮತ್ತು ಕುವೆಂಪು ಸಂಚಯ’ ಮತ್ತು ‘ಪು.ತಿ. ಸಂಚಯ’ಗಳ ಮಾದರಿಯಲ್ಲಿಯೇ ‘ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಂಚಯ’, ‘ಗೋಕಾಕ್ ಸಂಚಯ’, ‘ಮಾಸ್ತಿ ಸಂಚಯ’, ‘ಕಾರಂತ ಸಂಚಯ’ ಮತ್ತು ‘ಯು.ಆರ್.ಅನಂತಮೂರ್ತಿ ಸಂಚಯ’ ಮುಂತಾದ ಪ್ರಸಿದ್ಧ ಲೇಖಕರ ಸಂಚಯಗಳನ್ನು ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇವುಗಳ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಸಹ ಹೊರತರುವ ಬಗ್ಗೆ ಕ್ರಮಕೈಗೊಳ್ಳಲಾಗುತ್ತಿದೆ.

 (ಇ) ರಾಷ್ಟ್ರೀಯ ಪ್ರಶಸ್ತಿ: 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ರಾಷ್ಟ್ರಮಟ್ಟದಲ್ಲಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ‘ರಾಷ್ಟ್ರಮಟ್ಟದ ಪ್ರಶಸ್ತಿ’ಯೊಂದನ್ನು ಸ್ಥಾಪಿಸಿ, ರೂ.5.00 ಲಕ್ಷ ಮೊತ್ತದ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಾಷ್ಟ್ರಮಟ್ಟದ/ನಾಡಿನ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಲು ಒಂದು ತಜ್ಞ ಸಮಿತಿಯನ್ನು ರಚಿಸಿ, ನೀತಿ-ನಿಯಮಾವಳಿಗಳನ್ನು ರೂಪಿಸಿ ಅದರ ಆಧಾರದ ಮೇಲೆ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲು ಕ್ರಮಕೈಗೊಳ್ಳಲಾಗುವುದು.

 (ಈ) ಪ್ರಕಟಣೆಗಳು :

‘ಕುವೆಂಪು ಭಾಷಾ ಭಾರತಿ’ಯ ಅಂಗವಾಗಿ ಸ್ಥಾಪಿಸಲಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕಳೆದ ವರ್ಷವಷ್ಟೇ 56 ಪುಸ್ತಕಗಳನ್ನು ಹೊರತಂದಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ಘಾಟನೆಯ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳು ಸಂಪುಟ-1 ಸೇರಿದಂತೆ, 10 ಪುಸ್ತಕಗಳನ್ನು ಮುದ್ರಣ ಮಾಡಿ ಬಿಡುಗಡೆ ಮಾಡಲಾಗಿದೆ. ಕನ್ನಡ ಪ್ರಕಾಶನದ ಕ್ಷೇತ್ರದಲ್ಲಿಯೂ, ಮಹತ್ವದ ಹೆಜ್ಜೆಗುರುತುಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮೂಡಿಸುತ್ತ ಮುನ್ನಡೆಯಲಿದೆ.   ಕನ್ನಡ ಭವನದ ಆವರಣದಲ್ಲಿರುವ ಸಿರಿಗನ್ನಡ ಪುಸ್ಕ ಮಳಿಗೆಯಲ್ಲಿ ಪ್ರಾಧಿಕಾರದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಕಲಾಗ್ರಾಮದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿಯಲ್ಲಿ ಪುಸ್ತಕಗಳ ದಾಸ್ತಾನು ಮತ್ತು ಮಾರಾಟ ವ್ಯವಸ್ಥೆ ಮಾಡಲಾಗಿದೆ ಹಾಗೂ ಸುವವ್ಯಸ್ಥಿತವಾದ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ.

 

1. ವಿಚಾರ ಸಂಕಿರಣ ಸಮಾರಂಭಗಳ ವಿವರ

2. ಪ್ರಶಸ್ತಿ ಪ್ರದಾನ ಸಮಾರಂಭಗಳ ವಿವರ

3. ಕಮ್ಮಟಗಳ ವಿವರ

4. ಕಾರ್ಯಗಾರಗಳ ವಿವರ

5. ಪುಸ್ತಕ ಬಿಡುಗಡೆ ಸಮಾರಂಭಗಳ ವಿವರ

6. ಕುವೆಂಪು ಓದು ಕಮ್ಮಟಗಳ ವಿವರ

ಇತ್ತೀಚಿನ ನವೀಕರಣ​ : 28-06-2022 05:02 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕುವೆಂಪು ಭಾಷಾಭಾರತಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080