ಅಭಿಪ್ರಾಯ / ಸಲಹೆಗಳು

ಅಂಗರಚನೆ

I. ಸರ್ಕಾರಿ ಆದೇಶ ಸಂ: ಕಸಂವಾಪ್ರ:55:ಕರಅ:2009 ದಿ:30.05.2009ರಲ್ಲಿ ರಚಿಸಲಾದ ಈ ಪ್ರಾಧಿಕಾರವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಎಂದು ಕರೆಯಲಾಗುವುದು.
 

II. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ರಾಜ್ಯದ ಸಚಿವ ಸಂಪುಟ ದರ್ಜೆ ಸ್ಥಾನಮಾನ ಹೊಂದಿದವರಾಗಿರುತ್ತಾರೆ.
 

III. ಈ ಪ್ರಾಧಿಕಾರದ ಪ್ರಧಾನ ಕಚೇರಿಯು ಬೆಂಗಳೂರು ನಗರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಡಳಿತ ನಿಯಂತ್ರಣದಲ್ಲಿರುವ ಕಲಾಗ್ರಾಮಕ್ಕೆ ಹೊಂದಿಕೊಂಡಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಟ್ಟಡದಲ್ಲಿ ಆಡಳಿತ ಕಚೇರಿ ಮತ್ತು ಸಂಶೋಧನಾ ಕೇಂದ್ರ ಇರಬೇಕು.  ಅದರ ನಗರ ಕಚೇರಿ ಕನ್ನಡ ಭವನದ ಚಾಲುಕ್ಯ ವಿಭಾಗದ 2ನೇ ಮಹಡಿಯಲ್ಲಿ ಇರುತ್ತದೆ.
 

IV. ಈಗಾಗಲೇ ಅಸ್ತಿತ್ವದಲ್ಲಿರುವ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯು ಮೇಲೆ ಹೇಳಲಾದ ಆದೇಶದನ್ವಯ ಯಥಾವತ್ತಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಲ್ಲಿ ವಿಲೀನಗೊಂಡುಅನುವಾದ ವಿಭಾಗವಾಗಿ ಮುಂದುವರಿದು ಕಾರ್ಯನಿರ್ವಹಿಸಬೇಕು.  ಹಾಗೂ ಅದರ ಎಲ್ಲಾ ಚರ-ಸ್ಥಿರ ಆಸ್ತಿಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಒಂದು ಭಾಗವಾಗಿ ಮುಂದುವರಿಯುವುದು. 

V.    ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರ ವರ್ಗ :
 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಡಳಿತ, ಹಣಕಾಸು ಮತ್ತು ಶೈಕ್ಷಣಿಕ ಸಂಬಂಧಿ ಕೆಲಸಗಳನ್ನು ನಿರ್ವಹಿಸಲು ಈ ಮುಂದಿನಂತೆ ಅಧಿಕಾರಿ ವರ್ಗ ಇರಬೇಕು.
 

ಅ) ಅಧ್ಯಕ್ಷರು

ಆ) ರಿಜಿಸ್ಟ್ರಾರ್ (ಆಡಳಿತ)

ಇ) ರಿಜಿಸ್ಟ್ರಾರ್ (ಶೈಕ್ಷಣಿಕ)

ಈ)ಅರ್ಥಸದಸ್ಯರು
 

(ವಿವರಣೆ : ಇನ್ನು ಮುಂದೆ ಅರ್ಥಸದಸ್ಯರು ಎಂದು ಉಲ್ಲೇಖಿಸುವ ಕಡೆಗಳಲ್ಲಿ ಲೆಕ್ಕಪತ್ರಾಧಿಕಾರಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪದನಿಮಿತ್ತ ಅರ್ಥಸದಸ್ಯ ಎಂದು ಪರಿಭಾವಿಸತಕ್ಕದ್ದು).
 

 ಅ) ಅಧ್ಯಕ್ಷರು :

 1. ರಾಜ್ಯ ಸರ್ಕಾರವು ಅಧ್ಯಕ್ಷರನ್ನು ನಾಮನಿರ್ದೇಶಿಸುತ್ತದೆ ಮತ್ತು ಅವರು ಐದು ವರ್ಷಗಳ ಅವಧಿಯವರೆಗೆ ಪದಧಾರಣ ಮಾಡತಕ್ಕದ್ದು. ಹೀಗೆ ಅಧ್ಯಕ್ಷರಾಗಿ ನಾಮನಿರ್ದೇಶಿತರಾದವರು ಯಾವುದೇ ಸಂಸ್ಥೆಯಲ್ಲಿ ಪೂರ್ಣಾವಧಿಗೆ ವೇತನ/ಸಂಭಾವನೆ ಪಡೆಯುವ ಉದ್ಯೋಗಿಯಾಗಿರಬಾರದು.
   
 2. ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮುಖ್ಯಸ್ಥರಾಗಿರಬೇಕು. ಅವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಇತರ ಎಲ್ಲ ಸಮಿತಿ ಸಭೆಗಳ ಪದನಿಮಿತ್ತ ಅಧ್ಯಕ್ಷರಾಗಿರಬೇಕು.
   
 3. ಅಧ್ಯಕ್ಷರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದೊಡನೆ ಅಥವಾ ಸಂದರ್ಭಾನುಸಾರ, ಪ್ರತಿ ವರ್ಷಕ್ಕೆ ಗರಿಷ್ಠ ರೂ.1,00,000/-ಗಳೊಳಪಟ್ಟು, ಪ್ರತಿ ಸಂದರ್ಭದಲ್ಲೂ ಪ್ರತಿ ಸಾರಿ ರೂ.25,000/- ರೂಪಾಯಿ ಮಿತಿಯವರೆಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ದೇಶಗಳಿಗೆ ಒಳಪಟ್ಟಂತೆ ಜರೂರು ಸ್ವರೂಪದ ಯಾವುದೇ ಕಾರ್ಯಕ್ರಮವನ್ನು ನಿರ್ಧರಿಸಲು ಅಧಿಕಾರ ಹೊಂದಿರುವರು. ಆದರೂ ಇಂಥ ವೆಚ್ಚದ ವಿವರಗಳನ್ನು ಪ್ರಾಧಿಕಾರದ ಮುಂದಿನ ಸಭೆಯಲ್ಲಿ ಮಂಡಿಸಬೇಕು.
   
 4. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಿಗೆ ಕರ್ನಾಟಕ ಸರ್ಕಾರದ ರಾಜ್ಯ ಸಚಿವ ಸಂಪುಟ ದರ್ಜೆಯ ಸ್ಥಾನಮಾನಕ್ಕೆ ಒದಗಿಸಲಾಗುವ ಎಲ್ಲ ಸೌಲಭ್ಯಗಳನ್ನು ಹಾಗೂ ಪ್ರಾಧಿಕಾರ ನಿಗದಿ ಮಾಡುವ ಸೌಲಭ್ಯಗಳನ್ನು ನೀಡತಕ್ಕದ್ದು.
   

ಆ)ರಿಜಿಸ್ಟ್ರಾರ್ (ಆಡಳಿತ) :

 1. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಂಪೂರ್ಣ ಆಡಳಿತ ನಿರ್ವಹಣೆ, ಸಿಬ್ಬಂದಿಯ ಮೇಲ್ವಿಚಾರಣೆ ಹಾಗೂ ಲೆಕ್ಕಪತ್ರ ನಿಯಂತ್ರಣದ ಹೊಣೆಗಾರಿಕೆ ರಿಜಿಸ್ಟ್ರಾರ್ (ಆಡಳಿತ) ಇವರು ನೋಡಿಕೊಳ್ಳುವುದು. ಅಲ್ಲದೆ, ಇವರು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಹಾಗೂ ಇತರ ಸಮಿತಿ ಸಭೆಗಳ ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವುದು.
   
 2. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹಾಗೂ ಇತರ ಸಮಿತಿ ಸಭೆಗಳನ್ನು ಅಧ್ಯಕ್ಷರ ಸೂಚನೆಯ ಮೇರೆಗೆ ಕರೆಯುವುದು ಮತ್ತು ಸಭಾನಡೆವಳಿಗಳನ್ನು ನಿರ್ವಹಿಸುವುದು ಹಾಗೂ ಈ ಸಂಬಂಧವಾದ ಅನುಸರಣ ಕ್ರಮಗಳನ್ನು ಕೈಗೊಳ್ಳುವುದು.
   
 3. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ದಾಖಲೆಗಳನ್ನು ಮತ್ತು ಅಂಥ ಇತರ ಸ್ವತ್ತುಗಳನ್ನು ಸಂರಕ್ಷಿಸುವುದು.
   
 4. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ಅಧಿಕೃತ ಪತ್ರ ವ್ಯವಹಾರ, ಕರಾರು ಒಪ್ಪಂದಗಳಿಗೆ ಸಹಿ ಮುಂತಾದ ಕಾರ್ಯಗಳನ್ನು ನಿರ್ವಹಿಸುವುದು.
   
 5. ಚಾಲ್ತಿಯಲ್ಲಿರುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಸರ್ಕಾರಿ ಆಕ ಸಂಹಿತೆ ಹಾಗೂ ಸಾದಿಲ್ವಾರು ನಿಯಮಗಳ ವ್ಯಾಪ್ತಿಗೊಳಪಟ್ಟು ವೆಚ್ಚವನ್ನು ಭರಿಸುವುದು.
   
 6. ವರ್ಷದ ಆಯವ್ಯಯದ ಪರಿಮಿತಿಯಲ್ಲಿ ಹಾಗೂ ಆಕ ನಿಯಮಗಳಿಗೊಳಪಟ್ಟು ವಾರ್ಷಿಕ ಕ್ರಿಯಾಯೋಜನೆಯನ್ನು ಅರ್ಥಸದಸ್ಯರ ಸಮಾಲೋಚನೆಯಿಂದ ಪೂರ್ವಭಾವಿಯಾಗಿ ತಯಾರಿಸುವ ಮತ್ತು ಸಮಿತಿಯ ಮುಂದೆ ಒಪ್ಪಿಸುವ ಜವಾಬ್ದಾರಿ ಹೊಂದಿರಬೇಕು. ಅನುಮೋದಿತವಾದ ಈ ಕ್ರಿಯಾಯೋಜನೆಯ ಪ್ರಕಾರ ಅನುಷ್ಠಾನಗೊಳಿಸಿ, ಅದರ ಭೌತಿಕ ಮತ್ತು ಆಕ ಪ್ರಗತಿಯ ವರದಿಯನ್ನು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಮೂಲಕ ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ ಸಲ್ಲಿಸಬೇಕು.
   
 7. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಆಡಳಿತಾತ್ಮಕ ಅಧಿಕಾರಗಳನ್ನು ಚಲಾಯಿಸುವುದು.

 

ಇ)ರಿಜಿಸ್ಟ್ರಾರ್ (ಶೈಕ್ಷಣಿಕ):

 1. ಪ್ರಾಧಿಕಾರದ ಅಂಗರಚನೆ, ಧ್ಯೇಯೋದ್ದೇಶಗಳ ಕ್ರಮಸಂಖ್ಯೆ (V) (5)ರಲ್ಲಿರುವ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಸಂಬಂಧ ಕಾರ್ಯನಿರ್ವಹಿಸುವುದು.
   
 2. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಿಗೆ ಅಧಿಕೃತ ಪತ್ರ ವ್ಯವಹಾರ ನಡೆಸುವುದು.
   
 3. ಪ್ರಾಧಿಕಾರದ ಪ್ರಕಟಣೆಗಳ ಕೇಂದ್ರ ಗ್ರಂಥಾಲಯದ ವ್ಯವಸ್ಥಿತ ನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು.
   
 4. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಶೈಕ್ಷಣಿಕ ಕೆಲಸಗಳನ್ನು ನಿರ್ವಹಿಸುವುದು.

                              

ಈ)ಅರ್ಥಸದಸ್ಯರು:

 1. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಚೇರಿ ಅಧೀಕ್ಷಕರು ಪದನಿಮಿತ್ತ ಅರ್ಥಸದಸ್ಯರಾಗಿರಬೇಕು ಮತ್ತು ಇತರ ಸಮಿತಿಗಳ ಸದಸ್ಯರೂ ಆಗಿರುವರು.
   
 2. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಯಮಗಳಿಗೆ ಒಳಪಟ್ಟು ಮತ್ತು ರಿಜಿಸ್ಟ್ರಾರ್ ಆಡಳಿತ ಅವರ ಸಹ ಹೊಣೆಗಾರಿಕೆಯಲ್ಲಿ ಬಜೆಟ್ ಸಿದ್ಧಪಡಿಸುವ ಹಾಗೂ ಅನುಮೋದಿತ ಕಾರ್ಯಕ್ರಮಗಳಿಗೆ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಲು ಜವಾಬ್ದಾರರಾಗಿರತಕ್ಕದ್ದು.
   
 3. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪಾವತಿ ಮಾಡುವ ಹಣಕ್ಕೆ ಸೂಕ್ತ ದಾಖಲೆ ಪಡೆಯುವುದು. ಕ್ರಿಯಾಯೋಜನೆಯ ಪ್ರಕಾರ ಅನುಷ್ಠಾನಗೊಳಿಸಿದ ಬಗ್ಗೆ ಭೌತಿಕ ಮತ್ತು ಆಕ ಪ್ರಗತಿಯ ವರದಿಗಳನ್ನು ಸಿದ್ಧಪಡಿಸುವುದು.
   
 4. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಹಿಸಿಕೊಡಬಹುದಾದಂಥ ಇತರ ಲೆಕ್ಕಪತ್ರಗಳಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವುದು.

 

VI.    ಕುವೆಂಪು ಭಾಷಾ ಭಾರತಿ ಪ್ರಾಧಿಕಾರ  : ಸದಸ್ಯರು

(i)ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೆಳಕಂಡ 12 ಸದಸ್ಯರನ್ನು ಹೊಂದಿರಬೇಕು. ಅಧಿಕಾರಾವಧಿ 5 ವರ್ಷಗಳಾಗಿರಬೇಕು.
 

1. ಅಧ್ಯಕ್ಷರು
 

2.ರಿಜಿಸ್ಟ್ರಾರ್ (ಆಡಳಿತ)
 

3.ಅರ್ಥಸದಸ್ಯರು
 

4.ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕರು ಅಥವಾ ಅವರ ಪ್ರತಿನಿಧಿ. (ಉಪ ನಿರ್ದೇಶಕರ ಶ್ರೇಣಿಗೆ ಕಡಿಮೆ ಇಲ್ಲದಂತೆ).


5.ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ 9 ಮಂದಿ ಸದಸ್ಯರು (ರಾಜ್ಯ ಸರ್ಕಾರವು ಕನ್ನಡದ ಪ್ರಸಿದ್ಧ ಹಾಗೂ ಗಣ್ಯ ಸಾಹಿತಿಗಳನ್ನು ಅಥವಾ ವಿದ್ವಾಂಸರನ್ನು ಅಥವಾ ಈ ಕ್ಷೇತ್ರದಲ್ಲಿ ಅನುಭವ ಹಾಗೂ ಪರಿಣಿತಿ ಉಳ್ಳವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡುವುದು).


6.ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ಅಧ್ಯಕ್ಷರು/ಸದಸ್ಯರು ರಾಜೀನಾಮೆ ನೀಡಿದ ಅಥವಾ ಮರಣ ಹೊಂದಿದ ಅಥವಾ ಕಾನೂನಿನ ಕಾರಣದಿಂದ ಮುಂದುವರಿಯಲು ಅಸಮರ್ಥರಾದ ಕಾರಣದಿಂದ ಖಾಲಿಯಾದ ಯಾವುದೇ ಸ್ಥಾನವನ್ನು ತುಂಬಲು ರಾಜ್ಯ ಸರ್ಕಾರವು ವ್ಯಕ್ತಿಗಳನ್ನು ನಾಮ ನಿರ್ದೇಶಿಸಬಹುದು. ಹಾಗೆ ನಾಮನಿರ್ದೇಶಿತನಾದ ವ್ಯಕ್ತಿಯು ಉಳಿದ ಅವಧಿಗೆ ಮಾತ್ರ ಪದಧಾರಣ ಮಾಡಬೇಕು.

 

(ii)ಕಾರ್ಯನಿರ್ವಾಹಕ ಸಿಬ್ಬಂದಿ :             

1)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಹೊಣೆ ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು ರಿಜಿಸ್ಟ್ರಾರ್(ಆಡಳಿತ)  ಅವರದ್ದಾಗಿರುತ್ತದೆ.
 

2)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಂದಿನ ಆಡಳಿತ ನಿರ್ವಹಣೆ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಈಗಾಗಲೇ ಸರ್ಕಾರದ ಆದೇಶಸಂಖ್ಯೆ ಸಂಕಇ/275/ಕಸಧ/2005 ಭಾಗ ದಿನಾಂಕ:18.11.2005ರ ಪ್ರಕಾರ ಅನುವಾದ ಸಾಹಿತ್ಯ ಅಕಾಡೆಮಿಗೆ ಸೃಜಿಸಿ ಮಂಜೂರು ಮಾಡಿರುವ ಕೋಷ್ಠಕ-1ರಲ್ಲಿನ 6 ವಿವಿಧ ಹುದ್ದೆಗಳು ಅನುವಾದ ವಿಭಾಗದ ಹುದ್ದೆಗಳಾಗಿ ಮುಂದುವರಿಯುವುದು. ಈ ಹುದ್ದೆಗಳ ಜೊತೆಗೆ ಪ್ರತ್ಯೇಕವಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಕೋಷ್ಠಕ-2ರಲ್ಲಿನ ವಿವಿಧ 23 ಹುದ್ದೆಗಳ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಬೇಕು.
 

ಕೋಷ್ಠಕ-1

ಕ್ರ.ಸಂ.

ಹುದ್ದೆಗಳ ಹೆಸರು

ಹುದ್ದೆಗಳ ಸಂಖ್ಯೆ

1.

ರಿಜಿಸ್ಟ್ರಾರ್ (ಬಿ ದರ್ಜೆ ಅಧಿಕಾರಿ)

1

2.

ಕಚೇರಿ ಅಧೀಕ್ಷಕರು (ಶಿರಸ್ತೇದಾರ ಶ್ರೇಣಿ)

1

3.

ಶೀ್ರಲಿಪಿಗಾರ ಕಂ ಕಂಪ್ಯೂಟರ್ ಆಪರೇಟರ್

1

4.

ಪ್ರಥಮ ದರ್ಜೆ ಸಹಾಯಕ

1

5

ದಲಾಯತ್

2

 

                                         ಒಟ್ಟು

6

 

ಕೋಷ್ಠಕ -2

ಕ್ರ.ಸಂ.

ಹುದ್ದೆಗಳ ಹೆಸರು

ಹುದ್ದೆಗಳ ಸಂಖ್ಯೆ

1.

ರಿಜಿಸ್ಟ್ರಾರ್ (ಬಿ ದರ್ಜೆ ಅಧಿಕಾರಿ)

1

2.

ಲೆಕ್ಕಪತ್ರ ಅಧೀಕ್ಷಕರು (ಶಿರಸ್ತೇದಾರ ಶ್ರೇಣಿ)

1

3

ಸಂಪಾದಕರು (ಗುತ್ತಿಗೆ ಆಧಾರದ ಮೇಲೆ)

4

4.

ಶೀಗ್ರಲಿಪಿಗಾರ ಕಂ ಕಂಪ್ಯೂಟರ್ ಆಪರೇಟರ್

3

5.

ಪ್ರಥಮ ದರ್ಜೆ ಸಹಾಯಕ

2

6.

ಸ್ಟೋರ್ ಕೀಪರ್

1

7.

ಗ್ರಂಥಪಾಲಕ

1

8

ದ್ವಿತಿಯದರ್ಜೆ ಸಹಾಯಕ

4

9

ದಲಾಯತ್ (ಹೊರಗುತ್ತಿಗೆ ಸೇವೆ)

4

10

ಸ್ವೀಪರ್ಸ್ (ಹೊರಗುತ್ತಿಗೆ ಸೇವೆ)

2

 

                                     ಒಟ್ಟು

23

 

ಈ ಎಲ್ಲ ಸಿಬ್ಬಂದಿ ವರ್ಗದವರು ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಇವರ ಸಂಪೂರ್ಣ ಆಡಳಿತ ನಿಯಂತ್ರಣಕ್ಕೊಳಪಟ್ಟಿರಬೇಕು. ಇವರ ಸೇವಾ ಸೌಲಭ್ಯಗಳು ಹಾಗೂ ನಿಯಮಗಳು ಸರ್ಕಾರಿ ನೌಕರರ ನಿಯಮಾವಳಿಗೊಳಪಟ್ಟಿರಬೇಕು.
 

(iii) ಕುವೆಂಪು ಭಾಷಾ ಭಾರತಿಯ ಕರ್ತವ್ಯಗಳು ಮತ್ತು ಅಧಿಕಾರಗಳು :
     

(ಅ)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸರ್ವಸದಸ್ಯರ ಸಭೆಯ ಕೋರಂ 1/3 ಇರಬೇಕು.
 

(ಆ)ನಿರ್ದಿಷ್ಟ ಉದ್ದೇಶಗಳಿಗಾಗಿ ಮತ್ತು ನಿರ್ದಿಷ್ಟ ಅವಧಿಗಾಗಿ ಸರ್ಕಾರದಿಂದ ನಾಮಕರಣಗೊಂಡ ಸದಸ್ಯರಿಂದ 3ಕ್ಕಿಂತ ಹೆಚ್ಚು ಸದಸ್ಯರಿರದಂತೆ ಉಪಸಮಿತಿಗಳನ್ನು ರಚಿಸಿಕೊಳ್ಳುವುದು.  ಈ ಉಪಸಮಿತಿಗಳಿಗೆ ನಿರ್ದಿಷ್ಟ ಕೆಲಸ ಮತ್ತು ಅವಧಿಗಾಗಿ ಹೊರಗಿನಿಂದ ಪರಿಣತರನ್ನು ಸದಸ್ಯರನ್ನಾಗಿ ತೆಗೆದುಕೊಳ್ಳಬಹುದು. ಈ ಸಮಿತಿಗಳು ತಮ್ಮ ವರದಿಗಳನ್ನು /ಶಿಫಾರಸ್ಸುಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಒಪ್ಪಿಸಬೇಕು. ಅದಾದ ಮೇಲೆ ಈ ಉಪಸಮಿತಿಗಳು ತಂತಾನೆ ವಿಸರ್ಜನೆಗೊಳ್ಳುತ್ತವೆ.


(ಇ)ಯಾವುದೇ ಸದಸ್ಯರು ಅನುಕ್ರಮವಾಗಿ ನಿರಂತರ ಮೂರು ಸಭೆಗಳಿಗೆ ಅಧ್ಯಕ್ಷರ ಅನುಮತಿ ಪಡೆಯದೆ ಗೈರುಹಾಜರಾದರೆ ಅವರ ಸದಸ್ಯತ್ವ ರದ್ದಾಗುವುದು.


(ಈ)ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಾರ್ಷಿಕ ಕ್ರಿಯಾಯೋಜನೆಗಳನ್ನು ಮತ್ತು ವಾರ್ಷಿಕ ಬಜೆಟ್ನ್ನು ಸಿದ್ಧಪಡಿಸುವುದು. ಈ ಕ್ರಿಯಾಯೋಜನೆ ಅನುಷ್ಠಾನಕ್ಕೆ ಪೂರ್ವದಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯುವುದು.  ಬಜೆಟ್ನಲ್ಲಿ ಹಂಚಿಕೆ ಮಾಡಿದ ಆಯ-ವ್ಯಯದ ಪರಿಮಿತಿಯಲ್ಲಿ ನಿಯಮಗಳಂತೆಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.


(ಉ)ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆಮಾರ್ಗದರ್ಶನ ಸೂತ್ರಗಳನ್ನು ರಚಿಸುವುದು.


(ಊ)ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಆಕ ವರ್ಷದಲ್ಲಿ ತನ್ನ ಸರ್ವಸದಸ್ಯರ ಸಭೆಯನ್ನು ನಿಗದಿಪಡಿಸಿದ ದಿನಾಂಕದಂದು ಕೇಂದ್ರ ಸ್ಥಳದಲ್ಲಿ ನಾಲ್ಕು ತಿಂಗಳಿಗೊಂದು ಸಲ ಕರೆಯಬೇಕು. ಅಧ್ಯಕ್ಷರು ಅಥವಾ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 1/3ರಷ್ಟು ಸದಸ್ಯರಿಗಿಂತ ಕಡಿಮೆಯಿಲ್ಲದಷ್ಟು ಸದಸ್ಯರ ಕೋರಿಕೆಯ ಮೇರೆಗೆ ಯಾವುದೇ ಇತರ ಸಮಯದಲ್ಲಿ ಒಂದು ವಿಶೇಷ ಸಭೆಯನ್ನು ಕರೆಯಬಹುದು.


(ಋ)ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ನಿಯಮ (VIII)ರಲ್ಲಿ ವಿವರಿಸಿರುವಂತೆವಿವಿಧ ಮೂಲಗಳ ಮೂಲಕ ಸರ್ಕಾರದಿಂದ ಮಂಜೂರಾದ ಅನುದಾನಗಳು ಸೇರಿದಂತೆ ತನ್ನ ನಿಧಿಗಳ ಪರಿಮಿತಿಗಳೊಡನೆ ಪ್ರಾಧಿಕಾರದ ಉದ್ದೇಶಗುರಿ ಮತ್ತು ಧ್ಯೇಯಗಳ ಜಾರಿಗಾಗಿ ಎಲ್ಲ ಆಡಳಿತಾತ್ಮಕ ಮತ್ತು ಆಕ ಅಧಿಕಾರವನ್ನು ಚಲಾಯಿಸಲು ಅಗತ್ಯವೆಂದು ಭಾವಿಸುವ ಉಪನಿಯಮಗಳು ಹಾಗೂ ಕಾರ್ಯವಿಧಾನ ನಿಯಮಗಳನ್ನು ರಚಿಸಿ ಅವುಗಳಿಗೆ ಸರ್ಕಾರದ ಅನುಮೋದನೆ ಪಡೆದು ಅನುಷ್ಠಾನಗೊಳಿಸುವುದು.

 

VII.    ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹಣಕಾಸು

1)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ನಿಧಿಗಳು ಕೆಳಕಂಡವುಗಳನ್ನು ಒಳಗೊಂಡಿರುತ್ತದೆ.
 

ಅ) ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ದೇಶಗಳ ಅನುಷ್ಠಾನ ಮತ್ತು ವಿಸ್ತರಣೆಗಾಗಿ ಕರ್ನಾಟಕ ಸರ್ಕಾರಭಾರತ ಸರ್ಕಾರಕೇಂದ್ರ ಅಕಾಡೆಮಿಗಳುನವದೆಹಲಿ-ಇವುಗಳನ್ನು ಹಾಗೂ ಖಾಸಗಿ ಸಂಸ್ಥೆ ಹಾಗೂ ಸಾರ್ವಜನಿಕರಿಂದ ಬಂದ ಅನುದಾನಗಳುಕೊಡುಗೆಗಳುವಂತಿಕೆಗಳುದಾನಗಳು ಮುಂಗಡಗಳು.
 

ಆ)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉತ್ಪನ್ನಗಳ ಹಾಗೂ ಪುಸ್ತಕಗಳ ಮಾರಾಟದಿಂದ ಬಂದ ಜಮೆಗಳು ಮತ್ತು ಪ್ರಾಧಿಕಾರ ಇತರೆ ಯಾವುದೇ ರೀತಿಯಲ್ಲಿ ಸ್ವೀಕರಿಸಿದ ಹಣ.
 

2)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ (ಆಡಳಿತ) ಮತ್ತು ಅರ್ಥಸದಸ್ಯರು ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ಖಾತೆ ತೆಗೆದು ನಿರ್ವಹಿಸಬೇಕು.
 

3)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಥವಾ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪರವಾಗಿ ಸ್ವೀಕರಿಸಲಾದ ಎಲ್ಲ ಹಣವನ್ನು ಪ್ರಾಧಿಕಾರದ ಕೇಂದ್ರ ಸ್ಥಾನದಲ್ಲಿರುವ ಯಾವುದೇ ಅನುಸೂಚಿತ ಬ್ಯಾಂಕ್ನಲ್ಲಿ ಮಾತ್ರ ಪ್ರಾಧಿಕಾರದ ಹೆಸರಿನಲ್ಲಿ ಖಾತೆ ತೆರೆದು ಇಡತಕ್ಕದ್ದು.  ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಥವಾ ಅಧ್ಯಕ್ಷರಿಂದ ಅನುಮೋದಿತವಾದ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಅರ್ಥಸದಸ್ಯರಿಂದ ಮತ್ತು ರಿಜಿಸ್ಟ್ರಾರ್ (ಆಡಳಿತ)ರಿಂದ ರುಜು ಹಾಕಿದ ಚೆಕ್ನ ಹೊರತಾಗಿ ಹಣವನ್ನು ಡ್ರಾ ಮಾಡತಕ್ಕುದಲ್ಲ.  ಆದರೂ ತುರ್ತು ಸಂದರ್ಭದಲ್ಲಿ ರಿಜಿಸ್ಟ್ರಾರ್ (ಆಡಳಿತ) ಇವರು ಒಂದು ನಿರ್ದಿಷ್ಟ ಕಾರ್ಯಕ್ರಮಕ್ಕೆ ಜರೂರು ಸಂದರ್ಭದಲ್ಲಿ ರೂ.3,000/-ಗಳಿಗೆ ಮೀರದಷ್ಟು ಹಣವನ್ನು ಚೆಕ್ನ ಮೂಲಕ ಪಡೆಯಬಹುದು. ಆದರೆ ಹಾಗೆ ಮಾಡಿದ ವೆಚ್ಚದ ಬಗ್ಗೆ ಮುಂದಿನ ಸಭೆಯಲ್ಲಿ ಅನುಮೋದನೆಯನ್ನು ಪಡೆಯಬೇಕು.
 

4)ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಬರುವ ಅನುದಾನದ ಜೊತೆಗೆ ಬೇರೆ ಮೂಲಗಳಿಂದ ಬರುವ ದಾನ, ಕೊಡುಗೆ, ವಂತಿಗೆ ಮತ್ತು ಪುಸ್ತಕ ಮಾರಾಟದಿಂದ ಬರುವ ಎಲ್ಲ ಹಣವನ್ನು ಕುವೆಂಪು ಭಾಷಾ ಭಾರತಿಯ ಖಾತೆಗೆ ಜಮಾ ಮಾಡಬೇಕು ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಎಲ್ಲಾ ಜಮಾ ಖರ್ಚುಗಳನ್ನು ಒಂದೇ ರಿಜಿಸ್ಟ್ರರ್ನಲ್ಲಿ ನಿರ್ವಹಿಸಬೇಕು.
 

5)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಹೆಸರಿನಲ್ಲಿರುವ ಎಲ್ಲ ಹಣವನ್ನು ಭಾಷಾ ಭಾರತಿ ಪ್ರಾಧಿಕಾರಕ್ಕೆ ಅನ್ವಯಿಸತಕ್ಕ ನಿಯಮಗಳು ಮತ್ತು ನಿರ್ಣಯಗಳ ಪ್ರಕಾರ ಸಂದರ್ಭಾನುಸಾರ ಯಾವುದೇ ಉದ್ದೇಶಗಳಿಗಾಗಿ ವೆಚ್ಚ ಮಾಡತಕ್ಕದ್ದು. ಈ ವೆಚ್ಚಗಳು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, ಕರ್ನಾಟಕ ಸರ್ಕಾರದ ಆಕ ಸಂಹಿತೆ, ಖಜಾನೆ ಸಂಹಿತೆ ಮತ್ತು ಸಾದಿಲ್ವಾರು ನಿಯಮಗಳಿಗೆ ಒಳಪಟ್ಟಿರಬೇಕು.
 

6)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧಿಕಾರೇತರ ಸದಸ್ಯರು ಮಾತ್ರ ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ `ಎ' ಅನುಬಂಧದಲ್ಲಿರುವ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಪಡೆಯಲು ಅರ್ಹರಿರುತ್ತಾರೆ. ಅವರು ಭಾಷಾ ಭಾರತಿ ಪ್ರಾಧಿಕಾರದ ಮತ್ತು ಯಾವುದೇ ಸಮಿತಿಗಳ ಸಭೆಗಳಿಗೆ ಹಾಜರಾದಲ್ಲಿ ಪ್ರತಿದಿನಕ್ಕೆ ಸಭಾಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಪ್ರಾಧಿಕಾರದ ಅಧ್ಯಕ್ಷರು, ರಿಜಿಸ್ಟ್ರಾರ್ (ಆಡಳಿತ), ಸರ್ಕಾರಿ ಸದಸ್ಯರು ಹಾಗೂ ಅರ್ಥಸದಸ್ಯರು ಸಭಾಭತ್ಯೆ ಪಡೆಯಲು ಅರ್ಹರಾಗಿರುವುದಿಲ್ಲ.
 

7)ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಲೆಕ್ಕಪತ್ರಗಳನ್ನು ರಾಜ್ಯ ಲೆಕ್ಕಪತ್ರ ಇಲಾಖೆ/ಅಕೌಂಟೆಂಟ್ ಜನರಲ್ರವರು ಪ್ರತಿವರ್ಷ ಪರಿಶೋಧಿಸಬೇಕು.
 

XIII. ಸರ್ಕಾರಿ ನೌಕರರಿಗೆ ಮತ್ತು ಕಚೇರಿಗಳಿಗೆ ಅನ್ವಯಿಸತಕ್ಕ ಕರ್ನಾಟಕ ಸಿವಿಲ್ ಸೇವಾ ನಿಯಮಾವಳಿಗಳುಕರ್ನಾಟಕ ಆಕ ಸಂಹಿತೆಯಕರ್ನಾಟಕ ಖಜಾನೆ ಸಂಹಿತೆಯ ಮತ್ತು ಇತರ ನಿಯಮಗಳು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಉದ್ಯೋಗಿಗಳಿಗೂ ಅನ್ವಯಿಸುವುದು.
 

IX. ರಾಜ್ಯ ಸರ್ಕಾರವು ತನ್ನ ಕಾರ್ಯನೀತಿಹಣಕಾಸು ಮತ್ತು ಸಾರ್ವಜನಿಕ ಮಹತ್ವವುಳ್ಳ ವಿಷಯಗಳ ಮೇಲೆ ತಾನು ಅವಶ್ಯವೆಂದು ಭಾವಿಸುವಂಥ ಸೂಚನೆಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ನೀಡಬಹುದು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅಂಥ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅವಶ್ಯವೆಂದು ಭಾವಿಸುವಂಥ ವರದಿಗಳನ್ನು ಮತ್ತು ಇತರ ಮಾಹಿತಿಯನ್ನು ಒದಗಿಸಬೇಕು.
 

X. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರ ಅವಧಿ ಮುಗಿದು ಅವರ ಜಾಗಕ್ಕೆ ಬೇರೊಬ್ಬರನ್ನು ಸರ್ಕಾರ ನೇಮಿಸುವವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ತಾತ್ಕಾಲಿಕ ವ್ಯವಸ್ಥೆಯಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುವುದು.

ಇತ್ತೀಚಿನ ನವೀಕರಣ​ : 09-12-2020 01:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕುವೆಂಪು ಭಾಷಾಭಾರತಿ ಪ್ರಾಧಿಕಾರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080